fbpx
ಸಮಾಚಾರ

ಯಶ್‌ ಪರ್ಫೆಕ್ಟ್‌ ಆಗಲು ಕಾರಣ ಗೊತ್ತಾ? ರಾಧಿಕಾ ಹೇಳ್ತಿದ್ದಾರೆ ಕೇಳಿ

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್‌ ಯಶ್‌ ಅವರು 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಯಶ್ ಅವರಿಗೆ ನಟಿ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಪತಿಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ಅವರು, ಯಶ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

 

 

‘ಕೆಲವೊಮ್ಮೆ ನಾನು ಯೋಚಿಸುತ್ತೇನೆ ನೀವು ಇಷ್ಟೊಂದು ಪರ್ಫೆಕ್ಟ್ ಆಗಿರಲು ಕಾರಣವೇನು ಎಂದು…ಆನಂತರ ನನಗೆ ತಿಳಿಯುತ್ತದೆ ಇದಕ್ಕೆ ಕಾರಣವೇ ನೀವು. ನಿಮ್ಮ ಪಾಲಿನ ಕೇಕ್‌ ಕೂಡ ನನಗೆ ಕೊಡುತ್ತೀರಾ ಅದಕ್ಕೆ ಎಂದು. ಹ್ಯಾಪಿ ಬರ್ತಡೇ ಬೆಸ್ಟಿ’ ಎಂದು ರಾಧಿಕಾ ಬರೆದುಕೊಂಡಿದ್ದಾರೆ.

ಉಳಿದಂತೆ ರಾಕಿ ಬಾಯ್​ ಹುಟ್ಟುಹಬ್ಬಕ್ಕೆ ಕೆಜಿಎಫ್​ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ, ನಿರ್ಮಾಪಕ ವಿಜಯ್​ ಕಿರಗಂದೂರು, ಸಿನಿಮಾಟೋಗ್ರಾಫರ್​ ಭುವನ್​ ಗೌಡ, ನಿರ್ದೇಶಕ ಪವನ್​ ಒಡೆಯರ್​ ಸೇರಿದಂತೆ ಸಾಕಷ್ಟು ಮಂದಿ ಶುಭ ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top