fbpx
ಸಮಾಚಾರ

ಕೊರೋನಾ ಲಸಿಕೆ ಹಾಕಿಸಿಕೊಂಡ ಶಿಲ್ಪಾ ಶಿರೋಡ್ಕರ್​: ಅನುಭವ ಹಂಚಿಕೊಂಡ ನಟಿ..!

ಕೊರೊನಾ ವಿರುದ್ಧ ಲಸಿಕೆ ಅಭಿಯಾನ ಶುರುವಾಗಿದೆ.ಅನೇಕ ದೇಶಗಳಲ್ಲಿ ಈಗಾಗಲೇ ಕೊರೊನಾ ಲಸಿಕೆ ಹಾಕುವ ಕಾರ್ಯ ಶುರುವಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಈ ಮದ್ಯೆ ಖ್ಯಾತ ನಟಿ ಶಿಲ್ಪಾ ಶಿರೋಡ್ಕರ್ ಅವರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

 

 

ಹೌದು, ನಟ ಮಹೇಶ್ ಬಾಬು ಅವರ ಮಡದಿ ನಮ್ರತಾ ಶಿರೋಡ್ಕರ್​ ಅವರ ಸಹೋದರಿ ನಟಿ ಶಿಲ್ಪಾ ಶಿರೋಡ್ಕರ್​ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡ ಮೊದಲ ಬಾಲಿವುಡ್​ ನಟಿಯಾಗಿರುವ ಶಿಲ್ಪಾ ತಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಶಿಲ್ಪ ಅವರು “ಕೊರೋನಾ ಲಸಿಕೆ ಹಾಕಿಸಿಕೊಂಡು ತಾನು ಸುರಕ್ಷಿತವಾಗಿದ್ದೇನೆ ಹಾಗೂ ಇದು ನ್ಯೂ ನಾರ್ಮಲ್​. ” ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ದೇಶದಲ್ಲಿ ಈಗಾಗಲೇ ಕೊನೆಯ ಹಂತದ ಕೊರೊನಾ ವೈರಸ್ ಲಸಿಕಾ ತಾಲೀಮು ನಡೆಯುತ್ತಿದೆ. ದೇಶಾದ್ಯಂತ ಲಸಿಕೆಯ ವಿತರಣೆ ಸರಪಳಿ ವ್ಯವಸ್ಥೆ ಕೂಡಾ ರಚನೆಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ 13ರಿಂದ ಕೊವ್ಯಾಕ್ಸಿನ್ ಲಸಿಕೆ ಉಪಯೋಗಕ್ಕೆ ದೊರೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top