ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಬೇಕಿದ್ದ ಟೀಸರ್ ಪೈರಸಿ ಕಾಟದಿಂದ ಹುಟ್ಟುಹಬ್ಬದ ಹಿಂದಿನ ದಿನ ಬಿಡುಗಡೆಯಾಯಿತು. ಟೀಸರ್ ಗೆ ಭಾರಿ ಜನಪ್ರಿಯತೆ ವ್ಯಕ್ತವಾಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
Teaser releasing on Hombale YouTube Channel at 9.29PMhttps://t.co/ySf0l66zTS
Please do show us your love and support like always ❤️ pic.twitter.com/lUMfqJfoFJ— Yash (@TheNameIsYash) January 7, 2021
ಹೊಂಬಾಳೆ ಯೂಟ್ಯೂಬ್ ಜಾಲತಾಣದಲ್ಲಿ ಟೀಸರ್ ಬಿಡುಗಡೆಯಾಗಿದ್ದು, ರಗಡ್ ಲುಕ್ನಲ್ಲಿ ಯಶ್ ಮಿಂಚಿದ್ದಾರೆ. 2. 15 ನಿಮಿಷದ ಈ ಟೀಸರ್ನಲ್ಲಿ ಈ ಹಿಂದೆ ಇದ್ದ ಅನಂತ್ನಾಗ್ ಧ್ವನಿ ಬದಲು ಪ್ರಕಾಶ್ ರೈ ಧ್ವನಿ ಕೇಳಿಬಂದಿದೆ. ಇದರ ಜೊತೆ ತಾಯಿಯ ಮಮತೆಯ ದೃಶ್ಯಗಳು ಮನಕರಗಿಸುವಂತೆ ಇದೆ. ರಮಿಕಾ ಸೇನ್ ಆಗಿ ನಟಿ ರವೀನಾ ಟಂಡನ್ , ಅಧೀರನಾಗಿ ಸಂಜಯ್ ಪಾತ್ರವನ್ನು ಈ ಟೀಸರ್ನಲ್ಲಿ ಕಾಣಬಹುದಾಗಿದೆ. ಚಿತ್ರದ ಯೂನಿವರ್ಸಲ್ ಟೀಸರ್ (ಎಲ್ಲ ಸಂದರ್ಭ, ಭಾಷೆ ಪ್ರದೇಶಗಳಿಗೆ ತಲುಪುವ ರೀತಿ) ಸಿದ್ಧಪಡಿಸಲಾಗಿದೆ.
ತಂಡ ಈ ಮೊದಲು ಪ್ರಕಟಿಸಿದಂತೆ ಜ. 8ರಂದು ಬೆಳಿಗ್ಗೆ 10.18ಕ್ಕೆ ಬಿಡುಗಡೆ ಆಗಬೇಕಿತ್ತು. ಅಂದು ಚಿತ್ರದ ನಾಯಕ ನಟ ಯಶ್ ಅವರ ಜನ್ಮದಿನವೂ ಹೌದು. ಯುಟ್ಯೂಬ್ನಲ್ಲಿ ಬಿಡುಗಡೆಗಾಗಿ ವೇಳಾಪಟ್ಟಿ (ಷೆಡ್ಯೂಲ್) ಸಿದ್ಧಪಡಿಸಿ ಲೋಡ್ ಆಗಿದ್ದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿಬಿಟ್ಟಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹೊಂಬಾಳೆ ಫಿಲ್ಮ್ಸ್ ತಾನೇ ಅಧಿಕೃತವಾಗಿ ಟೀಸರ್ನ್ನು ಬಿಡುಗಡೆ ಮಾಡಿತು.
ಟೀಸರ್ ಬಿಡುಗಡೆ ಬಳಿಕ ವಿಡಿಯೋ ಹೇಳಿಕೆ ನೀಡಿದ ನಟ ಯಶ್, ‘ಯಾರೋ ಪುಣ್ಯಾತ್ಮರು ಒಂದು ದಿನ ಮೊದಲೇ ಟೀಸರನ್ನು ಹರಿಯಬಿಟ್ಟಿದ್ದಾರೆ. ಅದರಿಂದ ಅವರಿಗೇನು ಸಿಕ್ಕಿದೆಯೋ ಗೊತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ. ಟೀಸರನ್ನು ನೋಡಿ ಹಾಗೆಯೇ ಸಿನಿಮಾವನ್ನೂ ಪ್ರೋತ್ಸಾಹಿಸಿ’ ಎಂದು ವಿನಂತಿಸಿದ್ದಾರೆ.
ಟೀಸರ್ ಲೀಕ್ ಆಗಿರುವ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ಹಾಗೂ ಟ್ವಿಟರ್ನಲ್ಲಿ ವಿಡಿಯೋ ಹಾಕುವ ಮೂಲಕ ಹೇಳಿಕೆ ನೀಡಿರುವ ಯಶ್ ಅವರು, ಕೆಜಿಎಫ್ 2 ಚಿತ್ರದ ಟೀಸರ್ ಬಳಿಗ್ಗೆ 10.18ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಯಾರೋ ಪುಣ್ಯಾತ್ಮರು, ಮಹಾನುಭಾವರು ಈಗಾಗಲೇ ಟೀಸರ್ ಲೀಕ್ ಮಾಡಿದ್ದಾರೆ. ಇದರಿಂದ ಅವರಿಗೇನು ಸಂತೋಷ ಸಿಗುತ್ತದೆಯೋ ಗೊತ್ತಿಲ್ಲ. ಆದರೂ ಅವರಿಗೆ ದೇವರು ಒಳ್ಳೆಯದು ಮಾಡಲಿ. ಮುಖ್ಯವಾಗಿ ಅಭಿಮಾನಿಗಳು ಟೀಸರ್ ಬಿಡುಗಡೆ ವೇಳೆ ಸಾಕಷ್ಟು ಸಂಭ್ರಮವನ್ನಾಚರಿಸಬೇಕೆಂದುಕೊಂಡಿದ್ದರು. ಆದರೆ, ಬೇಸರಗೊಳ್ಳಬೇಡಿ. ನಿಮಗಾಗಿ ಹೊಂಬಾಳೆ ಯೂಟ್ಯೂಬ್ ಪೇಜ್ ನಲ್ಲಿ 9.29ಕ್ಕೆ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆನಂದಿಸಿ. ಇದು ಬರೀ ಟೀಸರ್. ಸಿನಿಮಾ ಇನ್ನೂ ಮುಂದೆ ಇದೆ ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
