fbpx
ಸಮಾಚಾರ

ಕಿರುತೆರೆ ಶೋಗಳಿಂದ ಗಾಯಕ ಹನುಮಂತನಿಗೆ ಮೋಸವೆಂಬ ವದಂತಿ; ಸ್ಪಷ್ಟನೆ ನೀಡಿದ ಗಾಯಕ!

ಕುರಿ ಕಾಯುವ ಹುಡುಗ ಹನುಮಂತ ‘ಸರಿಗಮಪ’, ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದರು. ಅವರಿಗೆ ರಿಯಾಲಿಟಿ ಶೋಗಳಿಂದ ಮೋಸ ಆಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ವತಃ ಗಾಯಕ ಹನುಮಂತ ಲಮಾಣಿ ಸ್ಪಷ್ಟನೆ ನೀಡಿದ್ದಾರೆ.

 

 

ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಹನುಮಂತ, “ನನಗೆ ರಿಯಾಲಿಟಿ ಶೋನಿಂದ ಏನೇನು ಸಿಗಬೇಕೋ ಅದೆಲ್ಲವೂ ಸಿಕ್ಕಿದೆ. ವಾಹಿನಿಯಿಂದ ಯಾವುದೇ ಮೋಸ ಆಗಿಲ್ಲ, ನನ್ನ ಹಾಗೂ ಝೀ ಕನ್ನಡ ವಾಹಿನಿಯ ಒಡನಾಟ ಬಹಳ ಚೆನ್ನಾಗಿದೆ.. ಯಾಕೆ ಈ ರೀತಿ ಸುಳ್ಳು ಸುದ್ದಿ ಮಾಡಿದ್ದಾರೆ, ಹಬ್ಬಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಅವರು ಹೇಳಿದಂತೆ ನನಗೆ ಏನೂ ಸಮಸ್ಯೆ, ಮೋಸಗಳು ಆಗಿಲ್ಲ.ಅಲ್ಲಿನ ಲೋಕಲ್ ಪೇಪರ್ ಯಾಕೆ ಈ ತರಹದ ಸುಳ್ಳು ಸುದ್ದಿ ಮಾಡಿದ್ರೋ ಗೊತ್ತಿಲ್ಲ. ಇಲ್ಲಿ ಬರುವ ಯಾವುದೇ ಸ್ಪರ್ಧಿಗಳಿಗೂ ಯಾವುದೇ ತೊಂದರೆ ಇಲ್ಲ.” ಎಂದು ಹೇಳಿದ್ದಾರೆ.

“ನಾನು ಗೋಕರ್ಣಕ್ಕೆ ಹೋಗಿದ್ದು ನಿಜ, ಅಲ್ಲಿಂದ ಬರುವಾಗ ಕುಮಟಾದಲ್ಲಿ ಬೇಕರಿಗೆ ಹೋಗಿದ್ದೆ. ಅಲ್ಲಿ ನೀರು ತಗೊಂಡು ಕೇಕ್ ತಿಂದು ಎಲ್ಲಾ ಈಸ್ ಕ್ರೀಮ್ ತಿಂದು . ಎಲ್ಲರೂ ನನ್ ಬಳಿ ಸೆಲ್ಫಿ ಎಲ್ಲ ತೆಗೆದುಕೊಂಡು ಚೆನ್ನಾಗೇ ಮಾತನಾಡಿದ್ರು. ಆದ್ರೆ ಈ ತರಹದ ಸುಳ್ಳು ಸುದ್ದಿ ಯಾಕೆ ಹಬ್ಬಿಸಿದ್ರೋ ಗೊತ್ತಿಲ್ಲ. ಅದರಿಂದ ಬಹಳ ಬೇಜಾರಾಗಿದೆ.” ಎಂದು ಝೀ ಕನ್ನಡ ವಾಹಿನಿಗೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top