ಟ್ವಿಟ್ಟರ್ ಸಂಸ್ಥೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಿದೆ. ಅಮೆರಿಕದ ಕ್ಯಾಪಿಟಲ್ ಮೇಲೆ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಟ್ರಂಪ್ ಬೆಂಬಲಿಗರು ಇನ್ನಷ್ಟು ಹಿಂಸಾತ್ಮಕ ಕೃತ್ಯ ನಡೆಸುವ ಸಾಧ್ಯತೆ ಇರುವುದನ್ನು ಮನಗಂಡಿರುವ ಟ್ವಿಟ್ಟರ್ ಸಂಸ್ಥೆ, ಟ್ರಂಪ್ ಅವರ ಅಕೌಂಟ್ನ್ನು ಪರ್ಮನೆಂಟ್ ಆಗಿ ರದ್ದುಗೊಳಿಸಿರುವುದಾಗಿ ತಿಳಿಸಿದೆ.
This must be wake up call for all who don’t yet understand threat to our democracies by unregulated big tech companies.
If they can do this to POTUS, they can do this to anyone.
Sooner India reviews intermediaries regulations, better for our democracy.@GoI_MeitY https://t.co/SWzaBfycJ8
— Tejasvi Surya (@Tejasvi_Surya) January 9, 2021
ಸಾಮಾಜಿಕ ಜಾಲತಾಣದಲ್ಲಿ ಇಂದು ಟ್ರಂಪ್ ಖಾತೆ ಶಾಶ್ವತವಾಗಿ ಸ್ಥಗಿತವಾಗಿರುವ ಸಂಗತಿ ಸದ್ದು ಮಾಡುತ್ತಿದೆ. ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ ಟ್ವಿಟ್ಟರ್ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅನಿಯಂತ್ರಿತ ದೊಡ್ಡ ತಾಂತ್ರಿಕ ಕಂಪೆನಿಗಳಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಇರುವ ಬೆದರಿಕೆಯನ್ನು ಇನ್ನೂ ಅರ್ಥಮಾಡಿಕೊಳ್ಳದವರಿಗಾಗಿ ಇದು ಎಚ್ಚರಿಕೆಯ ಗಂಟೆಯಾಗಬೇಕು. ಇದನ್ನು ಅವರು ‘ಪೋಟಸ್’ಗೆ (ಅಮೆರಿಕ ಅಧ್ಯಕ್ಷರ ಖಾತೆ) ಮಾಡುತ್ತಾರೆ ಎನ್ನಬಹುದಾದರೆ ಅವರು ಯಾರಿಗೆ ಬೇಕಾದರೂ ಮಾಡಬಹುದು. ಭಾರತವು ಮಧ್ಯಂತರ ನಿಯಂತ್ರಣಗಳ ಬಗ್ಗೆ ಶೀಘ್ರವೇ ಪರಾಮರ್ಶೆ ನಡೆಸುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಒಳಿತು’ ಎಂದು ಟ್ವೀಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
