fbpx
ಸಮಾಚಾರ

ಗಲ್ಲಿ ಕ್ರಿಕೆಟ್‌ ಆಡಲು ಹೋಗಿ ಎಡವಟ್ಟು ಮಾಡಿಕೊಂಡ ಆಮೀರ್‌ ಖಾನ್! ನೆಟ್ಟಿಗರಿಂದ ತರಾಟೆ

ಸೆಲೆಬ್ರೆಟಿಗಳ ಚಲನವಲನಗಳ ಬಗ್ಗೆ ನೆಟ್ಟಿಗರು ಸದಾ ನಿಗಾ ಇಟ್ಟಿರುತ್ತಾರೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಎಷ್ಟು ಜಾಗೃತಿ ವಹಿಸಿದರೂ ಸಾಲದು. ಸ್ವಲ್ಪ ಮೈ ಮರೆತರೂ ಟ್ರೋಲ್‌ ಆಗುವುದು ಗ್ಯಾರಂಟಿ. ಬಾಲಿವುಡ್‌ ನಟ ಆಮೀರ್‌ ಖಾನ್‌ ಕೂಡ ಅಂಥದ್ದೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

 

 

ಇತ್ತೀಚೆಗೆ ಹೊರಗಡೆ ಸುತ್ತಾಡಲು ಅವರು ಹೋಗಿದ್ದರು. ಆ ವೇಳೆ ಕೆಲವು ಮಕ್ಕಳು ಗಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಅವರ ಜೊತೆ ಆಮೀರ್‌ ಖಾನ್‌ ಕೂಡ ಸೇರಿಕೊಂಡರು. ಕೆಲವು ಹೊತ್ತು ಕ್ರಿಕೆಟ್‌ ಆಡಿ, ಮಕ್ಕಳ ಜೊತೆ ಬೆರೆತರು. ಅವರ ಜೊತೆ ಸೆಲ್ಫೀಗೂ ಪೋಸ್‌ ನೀಡಿದರು. ಆದರೆ ಈ ಸಂದರ್ಭದಲ್ಲಿ ಅವರು ಮಾಸ್ಕ್‌ ಹಾಕಿರಲಿಲ್ಲ! ಅದೇ ಈಗ ಚರ್ಚೆಯ ವಿಷಯ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಮೀರ್ ಖಾನ್ ಅವರ ಕ್ರಿಕೆಟ್ ವಿಡಿಯೋ ವೈರಲ್ ಆಗಿದ್ದು ಜನ ಕಮೆಂಟ್ ಮಾಡಿದ್ದಾರೆ. ಈಗ ಆಮೀರ್‌ಗೆ ಮಾಸ್ಕ್‌ನ ಅವಶ್ಯಕತೆ ಇಲ್ಲವೇ? ಅಣ್ಣಾವ್ರು ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾರೆ ಎನಿಸುತ್ತದೆ. ಅಮೀರ್ ಖಾನ್ ಗೆ ಸ್ವಚ್ಛತೆ ಗೊತ್ತಿಲ್ಲ. ನಟ ಬೇಜವಾಬಗ್ದಾರಿಯಿಂದ ನಡೆದುಕೊಂಡಿದ್ದಾರೆ. ಜನರಿಗೆ ರೋಲ್ ಮಾಡಲ್ ಆಗಬೇಕಕಾದವರು ಹೀಗೆ ನಡೆದುಕೊಳ್ಳಬಾರದಿತ್ತು ಎಂದು ಸಲಹೆ ಕೊಟ್ಟಿದ್ದಾರೆ. ‘ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ. ಸೆಲೆಬ್ರಿಟಿಗಳೇ ಹೀಗೆ ಮಾಡಿದರೆ ಸಾಮಾನ್ಯ ಜನರು ಅದನ್ನೇ ಫಾಲೋ ಮಾಡುತ್ತಾರೆ ಎಂಬುದು ನೆಟ್ಟಿಗರ ವಾದವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top