fbpx
ಸಮಾಚಾರ

ಜನವರಿ 12: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 12, 2021 ಮಂಗಳವಾರ
ವರ್ಷ : 1942 ಶಾರ್ವರಿ
ತಿಂಗಳು : ಮಾರ್ದಶಿರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ದಶೀ 12:22 pm
ನಕ್ಷತ್ರ : ಮೂಲ 7:37 am ಪೂರ್ವಾಷಾಢ 6:21 am
ಯೋಗ : ವ್ಯಾಘಾತ 2:48 am
ಕರಣ : ಶಕುನಿ 12:22 pm ಚತುಷ್ಪಾದa 11:23 pm

Time to be Avoided
ರಾಹುಕಾಲ : 3:17 pm – 4:42 pm
ಯಮಗಂಡ : 9:38 am – 11:03 am
ದುರ್ಮುಹುರ್ತ : 9:04 am – 9:49 am, 11:11 pm – 12:02 am
ವಿಷ : 4:43 pm – 6:14 pm
ಗುಳಿಕ : 12:28 pm – 1:52 pm

Good Time to be Used
ಅಮೃತಕಾಲ : 1:48 am – 3:19 am
ಅಭಿಜಿತ್ : 12:05 pm – 12:50 pm

Other Data
ಸೂರ್ಯೋದಯ : 6:45 am
ಸುರ್ಯಾಸ್ತಮಯ : 6:10 pm
ರವಿರಾಶಿ : ಧನುಸ್
ಚಂದ್ರರಾಶಿ : ಧನುಸ್

 

 

 

ಮೇಷ (Mesha)

ಯಾರೊಂದಿಗೂ ವಾದ-ವಿವಾದಕ್ಕೆ ಮುಂದಾಗಬೇಡಿ. ಉದ್ವೇಗದಲ್ಲಿ ಬಾಯಿತಪ್ಪಿ ಆಡುವ ಸಣ್ಣ ಮಾತೇ ದೊಡ್ಡ ಜಗಳಕ್ಕೆ ನಾಂದಿ ಹಾಡುವ ಅಪಾಯವಿದೆ. ಸಣ್ಣಪುಟ್ಟ ನಿರಾಶೆ ಕಾಡಬಹುದು. ಆಶಾವಾದಕ್ಕಿಂತ ಉತ್ತಮ ಪರಿಹಾರವಿಲ್ಲ.

 

ವೃಷಭ (Vrushabha)

ಕೆಲಸದ ಒತ್ತಡಗಳಲ್ಲಿ ಸಿಟ್ಟಿನಿಂದ ಮಾತನಾಡಬೇಡಿ. ಸಹೋದ್ಯೋಗಿಗಳೊಂದಿಗೆ ಪ್ರೀತಿ ವಿಶ್ವಾಸಗಳಿಸುವಿರಿ. ಆಗ ನಿಮ್ಮ ಕಾರ್ಯಗಳು ಸುಲಲಿತವಾಗಿರುವುದು.

 

ಮಿಥುನ (Mithuna)

ಇದು ಪರಿವರ್ತನೆಯ ಸಮಯ. ಆರಂಭದಲ್ಲಿ ಕಿರಿಕಿರಿ ಎನ್ನಿಸಿದರೂ ನಂತರ ಒಳಿತಾಗುವುದು. ಭವಿಷ್ಯದ ದೃಷ್ಟಿಯಿಂದ ನಿಮಗಿದು ಯಶಸ್ಸಿನ ದೊಡ್ಡ ಮೆಟ್ಟಿಲು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ಕರ್ಕ (Karka)

ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿರಿ. ಸಂಗಾತಿಯ ಜತೆ ಎಚ್ಚರಿಕೆಯಿಂದ ಮಾತನಾಡಿ. ಮಕ್ಕಳ ಅಭಿವೃದ್ಧಿಯು ಸಂತಸದ ಕ್ಷಣಗಳನ್ನು ತಂದುಕೊಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಸಿಂಹ (Simha)

ಅಂದುಕೊಂಡಿದ್ದನ್ನು ಸಾಧಿಸಿ ತೋರುವಿರಿ. ನೂತನ ಕಾರ್ಯಭಾರಗಳು ನಿಮ್ಮನ್ನು ಅರಸಿ ಬರುವುದು. ಸಂಗಾತಿಯ ಎಚ್ಚರಿಕೆ ಮಾತುಗಳನ್ನು ಆಲಿಸಿದಲ್ಲಿ ಮಾಡುವ ಕೆಲಸದಲ್ಲಿ ದ್ವಿಗುಣಲಾಭ ಹೊಂದುವಿರಿ.

 

ಕನ್ಯಾರಾಶಿ (Kanya)

ನಿಮ್ಮ ಕಾರ್ಯ ಕುಶಲತೆಗೆ ಮಾನ್ಯತೆ. ಮನೆಯಲ್ಲಿ ಸಂತಸದ ವಾತಾವರಣ ಅನಿರೀಕ್ಷಿತ ಧನಲಾಭ. ವಿದ್ಯಾ ಇಲಾಖೆಯಲ್ಲಿರುವವರಿಗೆ ಹೆಚ್ಚಿನ ಹೊಣೆಗಾರಿಕೆ. ಕೆಲವರಿಗೆ ವಿವಾಹ ನಿಶ್ಚಯವಾಗುವ ಸಂಭವ.

 

ತುಲಾ (Tula)

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ದೂರಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಒಮ್ಮೆ ನಿರ್ಧಾರ ಕೈಗೊಂಡ ಮೇಲೆ ಹಿಂದೆ ಮುಂದೆ ಯೋಚಿಸದೆ ಅದರ ಅನುಷ್ಠಾನದತ್ತ ಗಮನ ನೀಡಿರಿ.

 

ವೃಶ್ಚಿಕ (Vrushchika)

ಹಣಕಾಸಿನ ತೊಂದರೆ ಅಷ್ಟಾಗಿ ಬಾಧಿಸದು. ಬೆಟ್ಟದಷ್ಟು ಕಾಣುವ ತೊಂದರೆ ಮಂಜಿನಂತೆ ಕರಗಿ ಹೋಗುವುದು. ಬಂಧು ಮಿತ್ರರು ಸಹಕಾರ ನೀಡುವರು. ಮನೆಯಲ್ಲಿ ಶುಭ ಕಾರ್ಯದ ನಿರೀಕ್ಷೆ ಉಂಟಾಗುವುದು.

 

ಧನು ರಾಶಿ (Dhanu)

ಸ್ನೇಹಿತರು ಮತ್ತು ಬಂಧುಗಳ ಜೊತೆಯಲ್ಲಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದ ಸಮಯ ಕೊನೆಯಾಗುವ ದಿನವಿದು. ನಿಮ್ಮ ಧೋರಣೆಯಲ್ಲಿಯೂ ಗಣನೀಯ ಬದಲಾವಣೆ ಕಂಡುಬರುವುದು.

 

ಮಕರ (Makara)

ಮಾನಸಿಕವಾಗಿ ಸಣ್ಣಪುಟ್ಟ ಕಿರಿಕಿರಿಗಳು ದಿನವಿಡೀ ಕಾಡುವುದು. ಊಟ-ತಿಂಡಿ ವ್ಯತ್ಯಾಸ ಆಗುವುದರಿಂದ ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ತಲೆದೋರುವುದು. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಹಣಕಾಸು ಸ್ಥಿತಿ ಉತ್ತಮ.

 

ಕುಂಭರಾಶಿ (Kumbha)

ಜೀವನದಲ್ಲಿನ ಏಕಾತಾನತೆಯಿಂದ ಹೊರ ಬರಲು ಈದಿನ ಪ್ರವಾಸ ಕೈಗೊಳ್ಳುವುದು ಒಳ್ಳೆಯದು. ಪ್ರವಾಸದಿಂದಾಗಿ ಮನಸ್ಸು ಪ್ರಫುಲ್ಲಿತವಾಗುವುದು. ನಿಮ್ಮಲ್ಲಿ ಹೊಸ ಹುರುಪು ತುಂಬುವುದು.

 

ಮೀನರಾಶಿ (Meena)

ಈ ದಿನ ಯಾರನ್ನು ಅತಿಯಾಗಿ ನಂಬದಿರಿ. ನೀವೇ ಸೃಷ್ಟಿಸಿಕೊಂಡಿರುವ ಬಿಕ್ಕಟ್ಟನ್ನು ನೀವೇ ಪರಿಹರಿಸಿಕೊಳ್ಳಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಆತ್ಮೀಯ ಸ್ನೇಹಿತರು ನಿಮಗೆ ಸಹಾಯ ಹಸ್ತ ಚಾಚುವರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top