fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ವತಿಯಿಂದ ಮಕ್ಕಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಆಯೋಜನೆ

ಶಾಲೆಗಳಲ್ಲಿ ಪ್ರತಿವರ್ಷ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಸಿಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಪಿಡುಗಿನಿಂದಾಗಿ ಈ ಅವಕಾಶಗಳು ಇಲ್ಲದಂತಾಗಿತ್ತು. ಆದರೆ ಈ ಕೊರಗನ್ನು ಮರೆಸುವ ಸಲುವಾಗಿ ಇದೀಗ ರಾಜ್ಯ ಸಭಾ ಸದಸ್ಯರಾದ ಜಿಸಿಚಂದ್ರಶೇಖರ್ ಅವರು ‘ಸೋಷಿಯಲ್ ಮೀಡಿಯಾದಲ್ಲಿ ಚಿಣ್ಣರ ಕಲರವ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

 

 

ಯಾವುದೇ ಕ್ಷೇತ್ರ ಇರಲಿ ಮಕ್ಕಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿದರೆ ಮಾತ್ರ ಆ ಪ್ರತಿಭೆ ಅರಳಲು ಸಾಧ್ಯ. ಈ ನಿಟ್ಟಿನಲ್ಲಿ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಸಂಸದ ಜಿಸಿ ಚಂದ್ರಶೇಖರ್ ಅವರು ‘ಸೋಷಿಯಲ್ ಮೀಡಿಯಾದಲ್ಲಿ ಚಿಣ್ಣರ ಕಲರವ’ ಈ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಕರ್ನಾಟಕ ಎಲ್ಲಾ ಆಸಕ್ತ ಮಕ್ಕಳೂ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.

 

 

ಕರ್ನಾಟಕ ರಾಜ್ಯದ ಯಾವುದೇ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಮಕ್ಕಳ ಪರ್ಫಾರ್ಮೆನ್ಸ್ ವಿಡಿಯೋವನ್ನು ಜನವರಿ 20ರ ಒಳಗೆ ಕಳುಹಿಸಬೇಕು. ಸ್ಕ್ರೀನಿಂಗ್ ನಲ್ಲಿ ಆಯ್ಕೆಯಾದ ಮಕ್ಕಳ ಪ್ರಬಂಧ ಮತ್ತು ವಿಡಿಯೋಗಳನ್ನು ಜಿಸಿ ಚಂದ್ರಶೇಖರ್ ಅವರ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗುತ್ತದೆ. ಹಾಗೆಯೇ ಪ್ರತಿ ಸ್ಪರ್ಧೆಯಲ್ಲಿ ವಿಜೇತರನ್ನು ಹೆಸರಿಸಲಾಗುತ್ತದೆ. ಈ ವಿಜೇತರಿಗೆ ಆಕರ್ಷಕ ಬಹುಮಾನವನ್ನು ಕೂಡ ನೀಡಲಾಗುತ್ತದೆ.

 

ಆಟ-ಕೂಟ-ಪಾಠದ ಮನಸುಗಳು ಮೌನವಾಗಿವೆ, ಜಡವಾದ ಮಕ್ಕಳ ಮನಸು ಮತ್ತೆ ದೃಢವಾಗಬೇಕು . ಈ ನಿಟ್ಟಿನಲ್ಲಿ ಜಿ.ಸಿ ಚಂದ್ರಶೇಖರ್ ಸಂಸದರು ಪ್ರಾಯೋಜಿತ…

Posted by GC Chandrashekhar on Thursday, 7 January 2021

 

ಯಾವೆಲ್ಲಾ ಸ್ಪರ್ಧೆಗಳು ಇವೆ:
೧) ಏಕ ಪಾತ್ರಾಭಿನಯ ( ಪುರಾಣ, ಐತಿಹಾಸಿಕ ಮತ್ತು ಸಾಮಾಜಿಕ ಪರಿಣಾಮ ಭೀರುವಂತವು)
೨) ಪ್ರಭಂದ ಸ್ಪರ್ಧೆ (ಕರ್ನಾಟಕ ಇತಿಹಾಸ)
೩) ನೃತ್ಯ (ಏಕವ್ಯಕ್ತಿ)

 

*ಸ್ಪರ್ಧೆ-1:
ಏಕ ಪಾತ್ರಭಿನಯ
(ಪುರಾಣ, ಐತಿಹಾಸಿಕ, ಸಾಮಾಜಿಕ ಪರಿಣಾಮ ಬೀರುವ ಪಾತ್ರ)

1.ದ್ವೇಷಪೂರಿತ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು.
2. ರಾಜಕೀಯ ಪ್ರೇರಿತವಾಗಿರಬಾರದು.
3. ವಯಸ್ಸಿನ ಮಿತಿ 7 ರಿಂದ 12 ರ ಮತ್ತು 13 ರಿಂದ 16 ವರೆಗೆ ಮಾತ್ರ. (ಪ್ರತ್ಯೇಕ ಎರಡು ವಿಭಾಗ)
5. ವೀಡಿಯೋ 3 ರಿಂದ 5 ನಿಮಿಷಗಳವರೆಗೆ ಮಾತ್ರ.

 

ಸ್ಪರ್ಧೆ-2:
ಪ್ರಬಂಧ ಸ್ಪರ್ಧೆ -ಕರ್ನಾಟಕದ ಇತಿಹಾಸ*
1. ವಯಸ್ಸಿನ ಮಿತಿ 7 ರಿಂದ 12 ಹಾಗೂ 13 ರಿಂದ 16 ವರೆಗೆ ಮಾತ್ರ. (ಪ್ರತ್ಯೇಕ ಎರಡು ವಿಭಾಗ)
2.1000 ಪದಗಳನ್ನು ಮೀರಿರಬಾರದು, ವಿಷಯದ ಆಯ್ಕೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು.

ಸ್ಪರ್ಧೆ-3:
ನೃತ್ಯ (Solo)*
1. ವಯಸ್ಸಿನ ಮಿತಿ 6 ರಿಂದ 12 ಹಾಗೂ 13 ರಿಂದ 16 ವರೆಗೆ ಮಾತ್ರ. (ಪ್ರತ್ಯೇಕ ಎರಡು ವಿಭಾಗಗಳಲ್ಲಿ ಆಯ್ಕೆ ಮಾಡಲಾಗುತ್ತದೆ).
2.ಹಳೆಯ ವಿಡಿಯೋಗಳು ಬೇಡ.
3. ವೀಡಿಯೋ 4 ರಿಂದ 6 ನಿಮಿಷಗಳವರೆಗೆ ಮಾತ್ರ.

 
ಬಹುಮಾನ ವಿವರಗಳು:
ಪ್ರತಿ ಸ್ಪರ್ಧೆಯಲ್ಲಿ ಒಟ್ಟು 13 ಮಂದಿಗೆ ಬಹುಮಾನ ನೀಡಲಾಗುತ್ತಿದೆ.
ಪ್ರಥಮ ಬಹುಮಾನ(ರೂ.5000) ದ್ವಿತೀಯ ಬಹುಮಾನ (ರೂ.3000) ಸಮಾಧಾನಕರ ಬಹುಮಾನ ತಲಾ ರೂ.1000ದಂತೆ ಒಟ್ಟು ಹದಿಮೂರು ಮಂದಿಗೆ ನೀಡಲಾಗುತ್ತದೆ.

ನಿಮ್ಮ ಮಕ್ಕಳೂ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ನೀವು ಇಚ್ಛಿಸಿದರೇ ಇದೇ ಜನವರಿ 20ರ ಒಳಗೆ ನಿಮ್ಮ ಮಕ್ಕಳ ವಿಡಿಯೋ ಮತ್ತು ಫೋಟೋವನ್ನು 7760397078 ಅಥವಾ 7349189712 ನಂಬರ್ ಗಳಿಗೆ ವಾಟ್ಸಾಪ್ ಮಾಡಬಹುದು.

ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ರಾಜೇಶ್ (7760397078) ಅಥವಾ ಸ್ವಾತಿ (7349189712)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top