fbpx
ಸಮಾಚಾರ

ಟ್ರಂಪ್ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದು ಪಡಿಸಿದ್ದರ ಹಿಂದೆ ಅನಿವಾಸಿ ಭಾರತೀಯ ಮಹಿಳೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವೀಟರ್‌ ಖಾತೆಯನ್ನು ರದ್ದು ಮಾಡಿದ್ದು ವಿಶ್ವದೆಲ್ಲೆಡೆ ಚರ್ಚೆ ಆಗುತ್ತಿದೆ. ಕುತೂಹಲಕ ಸಂಗತಿಯೆಂದರೆ ಟ್ಟಿಟರ್‌ ಸಂಸ್ಥೆ ಟ್ರಂಪ್‌ ಅವರ ಖಾತೆಯನ್ನು ರದ್ದು ಮಾಡುವ ನಿರ್ಧಾರವನ್ನ ಪ್ರಕಟಿಸಿದ್ದು ಭಾರತೀಯ ಮೂಲದ ವಿಜಯಾ ಗಡ್ಡೆ.

 

 

45 ವರ್ಷದ ಅನಿವಾಸಿ ಭಾರತೀಯ ಮಹಿಳೆ ಮತ್ತು ಟ್ವಿಟರ್‌ನ ಉನ್ನತ ವಕೀಲೆ ವಿಜಯ ಗಡ್ಡೆ , ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸುವ ನಿರ್ಧಾರ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಗಳ ಮೂಲಕ ಕ್ಯಾಪಿಟಲ್ ಮೇಲಿನ ದಾಳಿಯನ್ನು ಪ್ರೋತ್ಸಾಹಿಸಿದರು ಎಂಬುದಾಗಿ ಭಾವಿಸಿರುವ ವಿಜಯ ಗಡ್ಡೆ, ಇದೇ ಮೊದಲ ಬಾರಿಗೆ ಟ್ರಂಪ್ ಟ್ವಿರ್ ಖಾತೆಯನ್ನು ನಿರ್ಬಂಧಿಸಿದ್ದಾರೆ.

ಟ್ವೀಟರ್‌ನ ಕಾನೂನು, ಯೋಜನೆಗಳು ಮತ್ತು ಸುರಕ್ಷತೆ ವಿಷಯಗಳ ಮುಖ್ಯಸ್ಥೆ ಆಗಿರುವ ವಿಜಯಾ ಗಡ್ಡೆ, ಜ.9ರಂದು ಟ್ವೀಟ್‌ ಮಾಡಿ, ‘ಸಂಸತ್ತಿನ ಹಿಂಸಾಚಾರ ಮತ್ತಷ್ಟುಬಿಗಡಾಯಿಸುವ ಅಪಾಯದ ಹಿನ್ನೆಲ್ಲೆಯಲ್ಲಿ ಟ್ರಂಪ್‌ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಲಾಗುತ್ತಿದೆ. ನಮ್ಮ ನಿಯಮಾವಳಿಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ನೀಡಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದರು.

ಹೈದರಾಬಾದ್‌ನಲ್ಲಿ ಜನಿಸಿದ ವಿಜಯಾ ಗಡ್ಡೆ ಕುಟುಂಬ ಟೆಕ್ಸಾಸ್‌ಗೆ ವಲಸೆ ಹೋಗಿ ಅಲ್ಲೇ ನೆಲೆಸಿದೆ. ವಿಜಯಾ ಗಡ್ಡೆ ಅವರು 2011ರಲ್ಲಿ ಟ್ವಿಟರ್ ಕಂಪನಿಗೆ ಸೇರಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top