fbpx
ಸಮಾಚಾರ

ಜನವರಿ 14: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 14, 2021 ಗುರುವಾರ
ವರ್ಷ : 1942 ಶಾರ್ವರಿ
ತಿಂಗಳು : ಪುಷ್ಯ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪ್ರತಿಪತ್ 9:00 am
ನಕ್ಷತ್ರ : ಶ್ರವಣ 5:04 am
ಯೋಗ : ವಜ್ರ 10:05 pm
ಕರಣ : ಬಾವ 9:00 am ಬಾಲವ 8:28 pm

Time to be Avoided
ರಾಹುಕಾಲ : 1:53 pm – 3:18 pm
ಯಮಗಂಡ : 6:49 am – 8:14 am
ದುರ್ಮುಹುರ್ತ : 10:35 am – 11:20 am, 3:07 pm – 3:52 pm
ವಿಷ : 9:24 am – 10:58 am
ಗುಳಿಕ : 9:39 am – 11:03 am

Good Time to be Used
ಅಮೃತಕಾಲ : 6:50 pm – 8:25 pm
ಅಭಿಜಿತ್ : 12:06 pm – 12:51 pm

Other Data
ಸೂರ್ಯೋದಯ : 6:45 am
ಸುರ್ಯಾಸ್ತಮಯ : 6:12 pm
ರವಿರಾಶಿ : ಧನುಸ್ upto 08:29
ಚಂದ್ರರಾಶಿ : ಮಕರ

 

 

 

ಮೇಷ (Mesha)

ನಂಬಿದವರೇ ಇಂದು ಕೈಕೊಡುವ ಸಾಧ್ಯತೆಯಿದೆ. ಬಂಧುಮಿತ್ರರೊಡನೆ ವಿರೋಧದಿಂದಾಗಿ ಜೀವನ ಮತ್ತು ವೃತ್ತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕುಟುಂಬದವರ ನೈತಿಕ ಬೆಂಬಲ ನಿಮಗೆ ಸ್ಫೂರ್ತಿದಾಯಕವಾಗಲಿದೆ.

 

ವೃಷಭ (Vrushabha)

ಮನಸ್ಸಿನ ತಾಕಲಾಟದಲ್ಲಿ ಗೊಂದಲ ಏರ್ಪಡುವ ಸಾಧ್ಯತೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ನೆಮ್ಮದಿಯನ್ನು ಹೊಂದುವಿರಿ. ಕೆಲವು ಮಹತ್ತರ ಜವಾಬ್ದಾರಿಗಳು ಇಂದು ನಿಮ್ಮ ಹೆಗಲೇರುವುದು. ಮಕ್ಕಳ ಪ್ರಗತಿ ಕಂಡು ಸಂತೋಷಪಡುವಿರಿ. ಕೌಟುಂಬಕ ಜೀವನ ಉತ್ತಮ.

 

ಮಿಥುನ (Mithuna)

ಉತ್ತಮ ಆರೋಗ್ಯವು, ಉನ್ನತ ಅಧಿಕಾರಿಗಳ ದರ್ಶನ ಸಿಗುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ನೀವು ಹೆಚ್ಚು ಜನಪ್ರಿಯರಾಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

 

ಕರ್ಕ (Karka)

ಜನಪ್ರಿಯತೆ ಹೆಚ್ಚಾಗುವುದು. ವ್ಯಾಪಾರ-ವ್ಯವಹಾರಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಉನ್ನತ ಮಟ್ಟಕ್ಕೆ ಒಯ್ಯುವುದು. ಸಾಮಾಜಿಕವಾಗಿ ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಡುವಿರಿ. ಪ್ರಯಾಣದಲ್ಲಿ ಎಚ್ಚರ. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು.

 

ಸಿಂಹ (Simha)

ಚಿಂತೆಯು ಮನುಷ್ಯನನ್ನು ಹೆಚ್ಚು ಬಾಧಿಸುತ್ತದೆ. ಕೆಲಸ ಕಾರ್ಯಗಳಲ್ಲಿ ಅನಗತ್ಯ ಭಯವನ್ನು ಇಟ್ಟುಕೊಳ್ಳಬೇಡಿ. ಕತ್ತಲೆ ಕಳೆದು ಬೆಳಕು ಮೂಡುವುದು. ಮಧ್ಯಾಹ್ನದ ನಂತರ ಶುಭ ವಾರ್ತೆಯನ್ನು ಕೇಳುವಿರಿ. ಆರ್ಥಿಕ ಸಮಸ್ಯೆ ಇರುವುದಿಲ್ಲ.

 

ಕನ್ಯಾರಾಶಿ (Kanya)

ದೈವಕೃಪೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಸಪಲತೆ ಹೊಂದುವಿರಿ. ಸ್ತ್ರೀಯರೊಡನೆ ಮಾತುಕತೆ, ಸಂಪತ್ತು ದೇವತಾ ದರ್ಶನದಿಂದ ಒಳಿತಾಗುವುದು. ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತಿಸಲು ಸಕಾಲವಾಗಿದೆ.

 

ತುಲಾ (Tula)

ಶನಿಮಹಾರಾಜರು ನಿಮ್ಮ ಮೇಲೆ ಕಣ್ಣು ಇಟ್ಟಿರುವರು. ಹಾಗಂತ ಅವರೇನು ದುಷ್ಟರಲ್ಲ. ಯಾರು ನಿಜವಾದ ಸ್ನೇಹಿತರೆಂದು ತಿಳಿಸಿಕೊಡುವರು. ಜೀವನದಲ್ಲಿ ಒಂದು ಶಿಸ್ತನ್ನು ರೂಢಿಸುವರು.

 

ವೃಶ್ಚಿಕ (Vrushchika)

ದೈವಕೃಪೆಯಿಂದ ಈ ದಿನ ಹಮ್ಮಿಕೊಂಡ ಎಲ್ಲಾ ಕಾರ್ಯಗಳು ಸುಲಲಿತವಾಗಲಿವೆ. ಮುಂದಿನ ದಿನಗಳು ಸಹ ನಿಮಗೆ ಆಶಾದಾಯಕವಾಗಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಧನು ರಾಶಿ (Dhanu)

ಸಮಸ್ಯೆ ಯಾರಿಗೂ ತಪ್ಪಿದ್ದಲ್ಲ. ಈ ದಿನವೂ ಅದಕ್ಕೆ ಹೊರತಾಗಿಲ್ಲ. ಸ್ವಲ್ಪ ತಾಳ್ಮೆಯಿಂದ ಇರಿ. ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿರಿ. ಅಧಿಕ ಕೆಲಸದ ಒತ್ತಡದಿಂದ ಮಾನಸಿಕವಾಗಿ ಬಳಲುವಿರಿ. ಭಾರಿ ಕನಸುಗಳನ್ನು ಕಾಣುವುದು ಈ ದಿನ ವ್ಯರ್ಥ.

 

ಮಕರ (Makara)

ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ. ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿರಿ. ಬಂಧುವರ್ಗದಿಂದ ಅಶುಭವಾರ್ತೆ ಕೇಳುವಿರಿ. ಪ್ರಯಾಣದಲ್ಲಿ ಎಚ್ಚರ.

 

ಕುಂಭರಾಶಿ (Kumbha)

ಕೆಲವು ಸಲ ಪ್ರಮುಖ ಜವಾಬ್ದಾರಿಗಳನ್ನು ತಪ್ಪಿಸಿಕೊಳ್ಳುವ ನೀವು ಈದಿನ ಹಾಗೇ ಮಾಡಲಾಗುವುದಿಲ್ಲ. ದೀರ್ಘಕಾಲದಿಂದ ಕುಂಟುತ್ತ ಸಾಗುತ್ತಿದ್ದ ಯೋಜನೆಗಳಿಗೆ ಪೂರ್ಣವಿರಾಮ ಹಾಕಲೇಬೇಕಿದೆ. ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮ.

 

ಮೀನರಾಶಿ (Meena)

ನಿಮ್ಮ ಮಾತುಗಾರಿಕೆಯ ಪ್ರಭಾವದಿಂದ ಹೇರಳ ಧನ ಸಂಗ್ರಹವಾಗುವುದು. ಸ್ನೇಹಿತರಿಗೆ ಸಿಹಿಯನ್ನು ಹಂಚಿ ಹೊಸ ವರ್ಷವನ್ನು ಬರಮಾಡಿಕೊಳ್ಳಿರಿ. ಹೊಸ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ಪ್ರಶಸ್ತ ಸಮಯ. ಮಕ್ಕಳು ನಿಮಗೆ ಸಂತಸವನ್ನು ನೀಡುವರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top