2021ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದಿನದಿಂದ ದಿನಕ್ಕೆ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ನೆನ್ನೆಯ ಪಂದ್ಯದಲ್ಲಿ ಕೇರಳ ತಂಡದ ಎಸ್. ಶ್ರೀಶಾಂತ್ ಮುಂಬೈ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಸ್ಲೆಡ್ಜ್ ಮಾಡಲು ಮುಂದಾದರು. ಇದಕ್ಕೆ ತನ್ನ ಬ್ಯಾಟಿಂಗ್ ಮೂಲಕ ಜೈಸ್ವಾಲ್ ಸರಿಯಾಗೆ ಖಡಕ್ ಉತ್ತರ ಕೊಟ್ಟರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
— Sandybatsman (@sandybatsman) January 14, 2021
ಎಸ್. ಶ್ರೀಶಾಂತ್ ಸುದೀರ್ಘ 7 ವರ್ಷಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಕೇರಳ ತಂಡವನ್ನ ಪ್ರತಿನಿಧಿಸುತ್ತಿರೋ ಶ್ರೀಶಾಂತ್, ಪುದುಚೇರಿ ಮತ್ತು ಮುಂಬೈ ವಿರುದ್ಧದ ಪಂದ್ಯವನ್ನಾಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಶ್ರೀಶಾಂತ್, ಸ್ಲೆಡ್ಜಿಂಗ್ ಮಾಡಲು ಹೋಗಿ, ಮುಜುಗರಕ್ಕೀಡಾಗಿದ್ದಾರೆ. ಮುಂಬೈ ಪರ ಬ್ಯಾಟಿಂಗ್ ಮಾಡುತ್ತಿದ್ದ 19 ವರ್ಷದ ಯಶಸ್ವಿ ಜೈಸ್ವಾಲ್, ಶ್ರೀ ಆಪ್ಸ್ಟಂಪ್ನತ್ತ ಎಸೆದ ಬಾಲ್ನಲ್ಲಿ ಬಿಗ್ ಶಾಟ್ ಹೊಡೆಯೋಕೆ ಮುಂದಾಗಿದ್ರು. ಆದ್ರೆ ಸಾಧ್ಯವಾಗಲಿಲ್ಲ. ಅಷ್ಟೇ ಶ್ರೀಶಾಂತ್ ಜೈಸ್ವಾಲ್ ಬಳಿ ಹೋಗಿ ಸ್ಲೆಡ್ಜಿಂಗ್ ಮಾಡಿಯೇ ಬಿಟ್ರು.
ಜೈಸ್ವಾಲ್ ತಕ್ಕ ಪ್ರತ್ಯುತ್ತರ..
ಶ್ರೀಶಾಂತ್ ಮಾಡಿದ ಸ್ಲೆಡ್ಜಿಂಗ್ಗೆ ಜೈಸ್ವಾಲ್ ತಕ್ಷಣಕ್ಕೆ ಯಾವುದೇ ಪ್ರತ್ಯುತ್ತರ ನೀಡದೇ ಸೈಲಂಟ್ ಆದ್ರು. ಆದ್ರೆ ಶ್ರೀ ಎಸೆದ ನಂತರದ ಬಾಲ್ ಅನ್ನೇ ಜೈಸ್ವಾಲ್ ಸಿಕ್ಸರ್ಗಟ್ಟಿದ್ರು. ಇಷ್ಟಕ್ಕೆ ಸುಮ್ಮನಾದ ಜೈಸ್ವಾಲ್ ಶ್ರೀಶಾಂತ್ಗೆ ಮತ್ತೊಂದು ಸಿಕ್ಸರ್ ಸಿಡಿಸಿದರು. ಇದು ಸಾಲದೆಂಬಂತೆ ಮುಂದಿನ ಬಾಲನ್ನು ಬೌಂಡರಿಗಟ್ಟಿ ಶ್ರೀಶಾಂತ್ಗೆ ತಿರುಗೇಟು ನೀಡಿದ್ರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
