ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಕುಟುಂಬದವರಿಗೆ ಮಾತ್ರವಲ್ಲ, ತಮ್ಮ ಪರ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಚೆನ್ನಾಗಿ ನೋಡಿ ಕೊಳ್ಳುತ್ತಾರೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ತಮ್ಮ ಬಾಡಿಗಾರ್ಡ್ಗೆ ಸ್ಪೆಷಲ್ ಉಡುಗೊರೆಯೊಂದನ್ನು ನೀಡಿದ್ದಾರೆ. ಏನದು ಅಂತೀರಾ? ಮುಂದೆ ಓದಿ
ಹೌದು, ಕಳೆದ ಏಳು ವರ್ಷಗಳಿಂದ ಕಿಚ್ಚನ ಜೊತೆಗೆ ಇದ್ದು ಸದಾ ಕಾಪಾಡುವ ಕೆಲಸ ಮಾಡುತ್ತಿರೋ ಸಾಯಿ ಕಿರಣ್ ಗೆ ಬ್ರ್ಯಾಂಡ್ ನ್ಯೂ ರಾಯಲ್ ಎನ್ಫೀಲ್ಡ್ ಬೈಕ್ ಕೊಡುವ ಮೂಲಕ ತಮ್ಮ ಜೊತೆಗಾರನಿಗೆ ಸರ್ಪ್ರೈಸ್ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿರುವ ಸಾಯಿ ಕಿರಣ್, ಕಿಚ್ಚ ಸುದೀಪ್ ಅವರು ಬುಲೆಟ್ ಬೈಕ್ ಗಿಫ್ಟ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಇದರಿಂದ ಖುಷಿ ಹಾಗೂ ಆಶ್ಚರ್ಯವಾಗಿದೆ. ಮೊದಲು ಕಿಚ್ಚ ಸುದೀಪ್ ಅವರನ್ನೇ ಹತ್ತಿಸಿಕೊಂಡು ಹೋಗುತ್ತೇನೆ. ಸುದೀಪ್ ಮೊದಲ ಸಿನಿಮಾ ಸ್ಪರ್ಷದಿಂದಲೂ ಅವರ ದೊಡ್ಡ ಅಭಿಮಾನಿ, ಕಳೆದ ಆರು ವರ್ಷಗಳಿಂದ ಸುದೀಪ್ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಚಿರಋಣಿಯಾಗಿದ್ದೇನೆ ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
On this Auspicious day of Sankranthi and Thursday My Gods Kichcha Sudeepa Anna and Priyakka Blessed me with this Beautiful Gift.,
What more would I expect than this.,, I shall cherish this particular day for my entire Lifetime @KicchaSudeep ANNA @iampriya06 AKKA OMSAIRAM pic.twitter.com/0hL8vxbecc— KICHCHA KIRAN (@KichchaKiran) January 14, 2021
ಅಂದಹಾಗೆ ಸುದೀಪ್ ಅವರ ಜೊತೆಗಿರುವ ಸಾಯಿ ಕಿರಣ್, ಕಿಚ್ಚನ ಅಪ್ಪಟ ಅಭಿಮಾನಿ. ಇಂದು ಮೊನ್ನೆಯಿಂದಲ್ಲ, ಸುದೀಪ್ ಮೊದಲ ಸಿನಿಮಾದಿಂದಲೂ. ಇದೇ ಪ್ರೀತಿಯಿಂದ ತಮ್ಮ ಹೆಸರಿನ ಮುಂದೆ ಕಿಚ್ಚ ಅಂತ ಸೇರಿಸಿಕೊಂಡು, ‘ಕಿಚ್ಚ ಸಾಯಿ ಕಿರಣ್’ ಅಂತಲೇ ಕರೆಸಿಕೊಳ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
