fbpx
ಸಮಾಚಾರ

ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ವಿಧಿವಶ

ಟೀಮ್ ಇಂಡಿಯಾದ ಆಲ್‌ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಅವರು ನಿಧನರಾಗಿದ್ದಾರೆ. ಹಠಾತ್ ಹೃದಯಾಘಾತದಿಂದ ಹಿಮಾಂಶು ಪಾಂಡ್ಯ ವಿಧಿವಶರಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸದ್ಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದ ಕೃನಾಲ್ ಅವರು ಬಯೋ ಬಬಲ್ ತೊರೆದು ತಮ್ಮ ಕುಟುಂಬ ಸೇರಿಕೊಂಡಿದ್ದಾರೆ.

ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಸಿಇಒ ಶಿಶಿರ್ ಹತ್ತಾಂಗಡಿ ಹೇಳಿದ್ದಾರೆ. ‘ಹೌದು, ಕೃನಾಲ್ ಪಾಂಡ್ಯ ಅವರು ಬಯೋಬಬಲ್ ಅನ್ನು ತೊರೆದಿದ್ದಾರೆ. ಅವರ ವೈಯಕ್ತಿಕ ದುರಂತದಿಂದಾಗಿ ಅವರಿಗೆ ಇನ್ನುಳಿದ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ. ಹಾರ್ದಿಕ್ ಮತ್ತು ಕೃನಾಲ್ ನಷ್ಟಕ್ಕೆ ಬರೋಡಾ ಕ್ರಿಕೆಟ್ ಅಸೋಸಿಯೇಶನ್ (ಬಿಸಿಎ) ಮರುಗುತ್ತದೆ,’ ಶಿಶಿರ್ ಹತ್ತಾಂಗಡಿ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top