fbpx
ಸಮಾಚಾರ

ಜನವರಿ 17: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 17, 2021 ಭಾನುವಾರ
ವರ್ಷ : 1942 ಶಾರ್ವರಿ
ತಿಂಗಳು : ಪುಷ್ಯ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಚತುರ್ಥೀ 8:07 am
ನಕ್ಷತ್ರ : ಪೂರ್ವಾ ಭಾದ್ರ Full Night
ಯೋಗ : ವರಿಘ 6:33 pm
ಕರಣ : ವಿಷ್ಟಿ 8:07 am ಬಾವ 8:35 pm

Time to be Avoided
ರಾಹುಕಾಲ : 4:44 pm – 6:09 pm
ಯಮಗಂಡ : 12:29 pm – 1:54 pm
ದುರ್ಮುಹುರ್ತ : 4:39 pm – 5:24 pm
ವಿಷ : 12:58 pm – 2:40 pm
ಗುಳಿಕ : 3:19 pm – 4:44 pm

Good Time to be Used
ಅಮೃತಕಾಲ : 11:11 pm – 12:54 am
ಅಭಿಜಿತ್ : 12:07 pm – 12:52 pm

Other Data
ಸೂರ್ಯೋದಯ : 6:46 am
ಸುರ್ಯಾಸ್ತಮಯ : 6:13 pm
ರವಿರಾಶಿ : ಮಕರ
ಚಂದ್ರರಾಶಿ : ಕುಂಭ upto 25:15+

 

 

 

ಮೇಷ (Mesha)

ಅತ್ಯಂತ ಸ್ವಾಭಿಮಾನಿಯಾದ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ಅತಿಯಾದ ಸ್ವಾಭಿಮಾನವು ಇತರರಿಗೆ ಅಹಂ ಆಗಿ ತೋರುವುದು. ಆದ್ದರಿಂದ ನೆರೆಹೊರೆಯವರೊಡನೆ ಸ್ವಲ್ಪ ಸೌಜನ್ಯದಿಂದ ವರ್ತಿಸಿರಿ.

 

ವೃಷಭ (Vrushabha)

ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಈ ದಿನದ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿರಿ. ದುರ್ಗೆಯು ದುಷ್ಟ ಜನರನ್ನು ಬಡಿದು ಶಿಷ್ಟರನ್ನು ರಕ್ಷಿಸುವಂತೆ ಈ ದಿನ ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ರಕ್ಷೆ ನೀಡುವಳು.

 

ಮಿಥುನ (Mithuna)

ಅನ್ಯರ ವಿಚಾರದಲ್ಲಿ ತಲೆ ಹಾಕದಿರಿ. ಅನ್ಯರು ಕೂಡಾ ನಿಮ್ಮ ವಿಚಾರದಲ್ಲಿ ಮೂಗು ತೂರಿಸುವುದನ್ನು ತಡೆಯಿರಿ. ಗುರುವಿನ ಕೃಪೆಯಿಂದ ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು.

 

ಕರ್ಕ (Karka)

ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆಯಿದೆ. ಆದರೆ ಮಾತಿನಲ್ಲಿ ಕುಶಲಿಗಳಾದ ನೀವು ಅದನ್ನು ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ.

 

ಸಿಂಹ (Simha)

ವಿವಾಹ ಆಕಾಂಕ್ಷಿಗಳಿಗೆ ಈ ದಿನ ಶುಭ ಸಮಾಚಾರ ಬರುವುದು. ಕೆಲವರಿಗೆ ಮದುವೆಯೂ ನಿಶ್ಚಯವಾಗುವ ಸಂದರ್ಭವಿರುತ್ತದೆ. ಬದುಕಿನ ಬಹುಮುಖ್ಯ ನಿರ್ಣಯವೊಂದನ್ನು ಇಂದು ನೀವು ಕೈಕೊಳ್ಳಬೇಕಾಗುವುದು.

 

ಕನ್ಯಾರಾಶಿ (Kanya)

ದುರಾಳಿಗಳನ್ನು ಎದುರಿಸುವ ಕಲೆ ನಿಮಗೆ ಕರಗತವಾಗಿರುವುದು. ಅಂತೆಯೇ ಅವರ ಮನಸ್ಥಿತಿಯನ್ನು ಅರಿತು ಅವರ ಸ್ನೇಹವನ್ನು ಬಯಸುವಿರಿ. ಆದರೆ ಶತ್ರು, ಶತ್ರುವೇ ಮಿತ್ರನಲ್ಲ. ಆತನನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ.

 

ತುಲಾ (Tula)

ಉನ್ನತ ಸ್ಥಾನದಲ್ಲಿ ಕೆಲಸ ಮಾಡುವ ನೀವು ಕೆಲವು ವೇಳೆ ಘನತೆ, ಗಾಂಭೀರ‍್ಯವನ್ನು ಪ್ರದರ್ಶಿಸಬೇಕಾಗುವುದು. ಹಾಗಾಗಿ ಸಹೋದ್ಯೋಗಿಗಳ ಜೊತೆ ಮತ್ತು ನಿಮ್ಮ ಕೈಕೆಳಗಿನವರ ಜೊತೆ ಸಲುಗೆ ಬೇಡ.

 

ವೃಶ್ಚಿಕ (Vrushchika)

ಮಕ್ಕಳ ವಿಚಾರದಲ್ಲಿ ಒತ್ತಡ ಬರುವುದು. ಶಿಕ್ಷ ಣದ ವಿಚಾರದಲ್ಲಿ ತಂದೆ ಮಗನಲ್ಲಿ ಅಪಸ್ವರ ಮೂಡುವುದು. ಶಿವಸ್ತುತಿಯನ್ನು ಪಠಿಸಿರಿ. ಗುರುವಿನ ಅನುಗ್ರಹ ಪಡೆಯುವುದರಿಂದ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಉಂಟಾಗುವುದು.

 

ಧನು ರಾಶಿ (Dhanu)

ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕೆಲವು ಅನಪೇಕ್ಷಿತ ಘಟನೆಗಳಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಗುರುವಿನ ಧ್ಯಾನದಿಂದ ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಮಕರ (Makara)

ನಿಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣಕಾಸು ಕೂಡಾ ನಿಮಗೆ ಸಕಾಲದಲ್ಲಿ ಒದಗಿ ಬರುವುದು. ಮನೆಯ ಕುಟುಂಬದ ಹಿರಿಯರ ಆರೋಗ್ಯದ ಕಡೆ ಗಮನ ನೀಡಿರಿ.

 

ಕುಂಭರಾಶಿ (Kumbha)

ಪರಾಕ್ರಮ ಕೆಲಸಗಳು ಸುಸೂತ್ರವಾಗಿ ನಡೆಯುವುದು. ಆದಾಗ್ಯೂ ನಿಮ್ಮ ಎದುರಾಳಿಗಳು, ಪ್ರತಿಸ್ಪರ್ಧಿಗಳು ತಲೆನೋವಿಗೆ ಕಾರಣರಾಗುತ್ತಾರೆ. ಭಕ್ತಿಯಿಂದ ಲಕ್ಷ್ಮೀನಾರಸಿಂಹ ದೇವರನ್ನು ಇಲ್ಲವೆ ವೀರಭದ್ರ ದೇವರನ್ನು ಸ್ಮರಿಸಿಕೊಳ್ಳಿರಿ.

 

ಮೀನರಾಶಿ (Meena)

ತಣ್ಣೀರನ್ನು ಆರಿಸಿ ಕುಡಿಯುವ ಕಾಲವಿದು. ಹಾಗಾಗಿ ನಿಮ್ಮ ಎದುರಾಳಿಯು ಆಡಿದ ಮಾತಿಗೆ ತಕ್ಷ ಣವೇ ಪ್ರತಿಕ್ರಿಯಿಸುವುದು ಈ ದಿನ ಸೂಕ್ತವಲ್ಲ. ಹಾಗಾಗಿ ಇದು ನಿಮ್ಮ ಸೋಲಲ್ಲ. ಸೋತಂತೆ ನಟಿಸಿ ಗೆಲ್ಲಲು ಪ್ರಯತ್ನಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top