fbpx
ಸಮಾಚಾರ

ನಟ, ನಿರ್ದೇಶಕ ಕುಣಿಗಲ್ ನಾಗಭೂಷಣ್ ಪತ್ನಿ, ‘ಚೆನ್ನಾಗ್ ಹೇಳಿದ್ರಿ ..’ ಡೈಲಾಗ್ ಖ್ಯಾತಿಯ ನಟಿ ವಿಧಿವಶ

ನಟ ಮತ್ತು ಖ್ಯಾತ ನಿರ್ದೇಶಕ ಕುಣಿಗಲ್ ನಾಗಭೂಷಣ್ ಅವರ ಪತ್ನಿ ಸರ್ವಮಂಗಳ ನಿನ್ನೆ ರಾತ್ರಿ 8.30ರ ಸಮಯದಲ್ಲಿ ನಿಧನರಾಗಿದ್ದಾರೆ. ೬೮ ವರ್ಷ ವಯಸ್ಸಿನ ಸರ್ವಮಂಗಳ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ವಿಚಾರ ಲಭ್ಯವಾಗಿದೆ. ಸುಮ್ಮನಳ್ಳಿಯ ಚಿತಾಗಾರದಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ.

ಸರ್ವಮಂಗಳ ಅವರು ಭಂಡ ನನ್ನ ಗಂಡ, ಹೆಂಡ್ತಿಯರೇ ಹುಷಾರ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ‘ಯಾರಿಗೂ ಹೇಳ್ಬೇಡಿ’ ಚಿತ್ರದ ಮರೆಯಲಾಗದಂತಹ “ಚೆನ್ನಾಗ್ ಹೇಳಿದ್ರಿ” ಎಂಬ ಡೈಲಾಗ್ ಇಂದ ಫೇಮಸ್ ಆಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top