fbpx
ಸಮಾಚಾರ

“ಓಟಿಟಿ ಅದ್ರೇನೂ ಓವರ್ಸೀಸ್ ಅದ್ರೇನೂ, ನಿರ್ಮಾಪಕನಿಗೆ ನಷ್ಟ ಆಗಬಾರದು” ದರ್ಶನ್‌ಗೆ ಟಾಂಗ್ ಕೊಟ್ಟ ಮುನಿರತ್ನ

ಸಿನಿಮಾಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದು ಚಿತ್ರರಂಗದಲ್ಲಿ ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಶಾಸಕ ಮತ್ತು ನಿರ್ಮಾಪಕ ಮುನಿರತ್ನ ಅವರು ಹೇಳಿಕೆ ನೀಡಿದ್ದು ನಟ ದರ್ಶನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒಟಿಟಿಯಲ್ಲಿ ಚಿತ್ರ ಬಿಡುಗಡೆಗೆ ನಟ ದರ್ಶನ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿ, ಓಟಿಟಿಯಾದರೇನು, ಓವರ್​ಸೀಸ್​ ಆದರೇನು..? ಹೂಡಿದ ಹಣ ವಾಪಸ್ ಬರಬೇಕು ಅಷ್ಟೆ. ನಿರ್ಮಾಪಕನಿಗೆ ಅನುಕೂಲ ಆಗುವ ರೀತಿ ಚಿತ್ರ ಬಿಡುಗಡೆಯಾಗಬೇಕು. ನಷ್ಟ ಆಗದ ರೀತಿ ವ್ಯಾಪಾರ ನೋಡಿಕೊಂಡು ಚಿತ್ರ ಬಿಡುಗಡೆ ಮಾಡುವ ಹೊಣೆ ನಿರ್ಮಾಪಕನದ್ದು ಎಂದು ತಿಳಿಸಿದರು.

ಈ ಬಗ್ಗೆ ಯಾರು ಏನೂ ಮಾತನಾಡಬಾರದು. ಸಿನಿಮಾ ಬಿಡುಗಡೆ ನಿರ್ಮಾಪಕನಿಗೆ ಸಂಬಂಧಿಸಿದ್ದು. ಎಲ್ಲಿ, ಯಾವಾಗ ಬಿಡುಗಡೆ ಮಾಡಿದರೆ ಗಳಿಕೆ, ಲಾಭ ಬರುತ್ತೆ ಅನ್ನೊದು ನಿರ್ಮಾಪಕನಿಗೆ ಗೊತ್ತಿರುತ್ತೆ. ಒಟಿಟಿ ಆದರೇನು ಓವರ್​ಸೀಸ್​ ಆದರೇನು ಲಾಭ ಆದರೆ ಸಾಕು ಎಂದು ದಾಸನಿಗೆ ಮುನಿರತ್ನ ಟಾಂಗ್ ನೀಡಿದರು.

ದರ್ಶನ್ ಹೇಳಿದ್ದೇನು?
ಜನವರಿ 10ರಂದು ಫೇಸ್‍ಬುಕ್ ಲೈವ್ ಬಂದಿದ್ದ ಸಾರಥಿ, ರಾಬರ್ಟ್ ಸಿನಿಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಇದೇ ವೇಳೆ ಓಟಿಟಿ ಪ್ಲಾಟ್‍ಫಾರಂನಲ್ಲಿ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಅವರು, ಥಿಯೇಟರ್ ನಲ್ಲಿ ಕೇಳುವ ಚಪ್ಪಾಳೆಗಳೇ ನಮಗೆ ಮುಖ್ಯ. ಸದ್ಯ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೂ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದರು.

”ಅಂಬಾನಿ 5ಜಿ ನೆಟ್‌ವರ್ಕ್ ಲಾಂಚ್‌ ಮಾಡುತ್ತಿದ್ದಾರೆ. ಅವರ 5ಜಿ ನೆಟ್‌ವರ್ಕ್ ಚಾಲ್ತಿಯಲ್ಲಿರಬೇಕು ಎಂದರೆ ಎಲ್ಲರೂ ಮೊಬೈಲ್‌ಗೆ ಅಡಿಕ್ಟ್ ಆಗಬೇಕು. 5ಜಿ ಓಡಬೇಕು ಎಂದರೆ ಓಟಿಟಿಯಲ್ಲಿ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು. ಅದೇ ಚಿತ್ರಮಂದಿರಗಳು ತೆರೆದುಬಿಟ್ಟರೆ ಓಟಿಟಿಗಳ ಮಾರುಕಟ್ಟೆಕುಸಿಯುತ್ತದೆ. ಹಾಗಾಗಿ ಅಂಬಾನಿ ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸುತ್ತಿರಬಹುದು.. ”

‘ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ನೀಡದೆ ಇರುವುದರ ಹಿಂದೆ ಅಂಬಾನಿಯ 5ಜಿ ಸ್ಕಾ್ಯಮ್‌ ಇದೆ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ಯಾಕೆಂದರೆ ಮಾಲ್‌ಗಳು, ಮಾರುಕಟ್ಟೆ, ಅಂಗಡಿ, ಕಲ್ಯಾಣ ಮಂಟಪಗಳು, ಶಾಲಾ-ಕಾಲೇಜುಗಳು ತೆರೆದಿವೆ. ಎಲ್ಲ ಕಡೆ ಜನ ಸೇರುತ್ತಿದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಮಾತ್ರ ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ನೀಡುತ್ತಿಲ್ಲ. ಇದಕ್ಕೆಲ್ಲ ಕಾರಣ, 5ಜಿ! ಅಂಬಾನಿ ಅವರು 5ಜಿ ಸ್ಟಾರ್ಟ್ ಮಾಡಿದ್ದಾರೆ. ಅವರಿಗೆ ಮೊಬೈಲ್ ಯೂಸ್ ಆದರೆ, 5ಜಿ ಓಡೋದು. ಅದಕ್ಕೋಸ್ಕರ ಪಾಪ, ದೊಡ್ಡ ದೊಡ್ಡವರಿಗೆ ಹೇಳಿ ಹೀಗೆ ಮಾಡಿಸಿರಬಹುದು.’ ಎಂದು ಅಭಿಪ್ರಾಯ ಪಟ್ಟಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top