fbpx
ಸಮಾಚಾರ

ವಾಟ್ಸ್‌ಆ್ಯಪ್‌ಗೆ ಪೈಪೋಟಿ ಕೊಟ್ಟಿದ್ದ ‘ಸಿಗ್ನಲ್’ ವಿಶ್ವಾದ್ಯಂತ ಸ್ಥಗಿತ

ವಾಟ್ಸ್‌ಆ್ಯಪ್‌ಗೆ ದಿಢೀರ್‌ ಪೈಪೋಟಿ ನೀಡಿದ್ದ ಮೆಸೇಜಿಂಗ್‌ ಆ್ಯಪ್‌ ‘ಸಿಗ್ನಲ್‌’ನ ಕಾರ್ಯಸ್ಥಗಿತಗೊಂಡಿದೆ. ನೀವು ಸಿಗ್ನಲ್‌ ಅಪ್ಲಿಕೇಶನ್ ತೆರೆಯಬಹುದು ಮತ್ತು ಸಂದೇಶಗಳನ್ನು ಕಳುಹಿಸಬಹುದಾದರೂ, ಇದು ಯಾವುದನ್ನೂ ತಲುಪಿಸಲು ಸಿಗ್ನಲ್‌‌ ಅಪ್ಲಿಕೇಶನ್‌ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಗಳು ತಡ ರಾತ್ರಿಯಿಂದಲೂ ಕಾಣಿಸಿಕೊಂಡಿದ್ದು, ಸದ್ಯ ಜಾಗತಿಕವಾಗಿ ಸರ್ವರ್‌‌ ಡೌನ್‌ ಆಗಿದೆ.

ಈ ಬಗ್ಗೆ ಶುಕ್ರವಾರ ರಾತ್ರಿ ಟ್ವೀಟ್‌ ಮಾಡಿರುವ ಸಿಗ್ನಲ್ ಕಂಪನಿಯು, ‘ನಾವು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಸೇವೆಗೆ ಮರಳಲು ಶ್ರಮಿಸುತ್ತಿದ್ದೇವೆ.’ ಎಂದು ತಿಳಿಸಿದೆ. ‘ನಾವು ಹೆಚ್ಚುವರಿ ಸಾಮರ್ಥ್ಯ ಹೊಂದಿರುವ ಹೊಸ ಸರ್ವರ್‌ಗಳನ್ನು ತಡೆರಹಿತವಾಗಿ ಅಳವಡಿಸುತ್ತಿದ್ದೇವೆ. ಲಕ್ಷಾಂತರ ಹೊಸ ಬಳಕೆದಾರರು ಗೋಪ್ಯತೆಗೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನಿಮ್ಮ ತಾಳ್ಮೆಯನ್ನು ನಾವು ಪ್ರಶಂಸಿಸುತ್ತೇವೆ’ ಎಂದು ಸಿಗ್ನಲ್‌ ಹೇಳಿದೆ.

ಅಂದಹಾಗೆ ಬಳಕೆದಾರರ ಭದ್ರತೆ ಮತ್ತು ಗೋಪ್ಯತೆಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲಗಳಿಂದಾಗಿ ಭಾರತದಲ್ಲಿ ಸಿಗ್ನಲ್‌ ಆ್ಯಪ್‌ನ ಬಳಕೆದಾರರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top