fbpx
ಸಮಾಚಾರ

ಹಿರಿಯ ನಟಿ ಸುಧಾರಾಣಿ ತಂದೆ ನಿಧನ

ಕನ್ನಡ ಚಿತ್ರರಂಗದ ಖ್ಯಾತ ನಟಿ ಸುಧಾರಾಣಿ ಅವರ ತಂದೆ ಎಚ್‌.ಎಸ್‌.ಗೋಪಾಲಕೃಷ್ಣ ನೆನ್ನೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ೯೩ ವರ್ಷದ ಗೋಪಾಲಕೃಷ್ಣ ಬಹುವರ್ಷಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸಿದೆ ಅವರು ನೆನ್ನೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸುಧಾರಾಣಿ ಅವರ ನಿವಾಸದಲ್ಲಿ ಸುಧಾರಾಣಿ ತಂದೆ ನಿಧನರಾಗಿದ್ದಾರೆ. ಇನ್ನು ಗೋಪಾಲಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇಂದು (ಶನಿವಾರ) ಮಧ್ಯಾಹ್ನ ಬೆಂಗಳೂರಿನ ಹರೀಶ್ಚಂದ್ರ ಘಾಟ್‌ನಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲ ವರ್ಷಗಳಿಂದ ತಂದೆಯ ಆರೋಗ್ಯಕ್ಷೇಮ ನೋಡಿಕೊಳ್ಳಲು ನರ್ಸ್‌ ಕವಿತಾರನ್ನು ಸುಧಾರಾಣಿ ನೇಮಕ ಮಾಡಿದ್ದರು. ತಂದೆಯ ಪ್ರತಿ ಹುಟ್ಟುಹಬ್ಬವನ್ನು ಸ್ಪೆಷಲ್‌ ಆಗಿ ಆಚರಿಸುವ ಸುಧಾರಾಣಿ, 2017ರಲ್ಲಿ ತಂದೆಯ ಹುಟ್ಟುಹಬ್ಬದ ದಿನ ತಾಯಿಗೂ ಕೇಕ್‌ ತಂದು ಕಟ್ ಮಾಡಿಸಿದರು. ತುಂಬಿದ ಕುಟುಂಬವನ್ನು ಅಗಲಿರುವ ಗೋಪಾಲಕೃಷ್ಣರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top