fbpx
ಸಮಾಚಾರ

ರಮೇಶ್ ಅರವಿಂದ್ ಪುತ್ರಿಯ ಅದ್ಧೂರಿ ಆರತಕ್ಷತೆ: ಯಾರ್ಯಾರು ಗಣ್ಯರು ಬಂದಿದ್ದಾರೆ ನೋಡಿ

ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಮೇಶ್ ಅರವಿಂದ್– ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ನೆರವೇರಿತು. ರಾಜಕೀಯ ಕ್ಷೇತ್ರ ಹಾಗೂ ಚಿತ್ರರಂಗದ ಗಣ್ಯರು ಈ ಶುಭ ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಯನ್ನು ಹಾರೈಸಿದರು.

 

 

ಡಿಸೆಂಬರ್ 28 ರಂದು ನಿಹಾರಿಕಾ ಅವರು ಅಕ್ಷಯ್ ಅವರನ್ನು ಕೈಹಿಡಿದಿದ್ದರು. ಕೊರೊನಾ ಹಿನ್ನಲೆ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಸೇರಿ ಸರಳವಾಗಿ ಮದುವೆ ಸಮಾರಂಭ ನಡೆದಿತ್ತು. ನೆನ್ನೆ ಖಾಸಗಿ ಹೋಟೆಲಿನಲ್ಲಿ ಆರತಕ್ಷತೆ ಸಮಾರಂಭ ನಡೆಯಿತು.

 

 

ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಚಿವರಾದ ಆರ್‌. ಅಶೋಕ್‌, ಸುರೇಶ್‌ ಕುಮಾರ್‌, ಡಾ. ಸುಧಾಕರ್‌, ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಸಂಸದರಾದ ಸುಮಲತಾ ಅಂಬರೀಷ್‌, ತೇಜಸ್ವಿ ಸೂರ್ಯ, ಶಾಸಕ ಮುನಿರತ್ನ ಸೇರಿದಂತೆ ಹಲವು ರಾಜಕಾರಣಿಗಳು ಆರತಕ್ಷತೆಯಲ್ಲಿ ಪಾಲ್ಗೊಂಡು, ನವದಂಪತಿಗೆ ಶುಭ ಹಾರೈಸಿದರು.

 

 

ಅಲ್ಲದೆ, ನಟರಾದ ರವಿಚಂದ್ರನ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌, ಸುದೀಪ್‌, ಯಶ್‌, ಶ್ರೀಮುರಳಿ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಸಂಗೀತ ನಿರ್ದೇಶಕರಾದ ಹಂಸಲೇಖ, ಗುರುಕಿರಣ್‌, ಗಾಯಕ ವಿಜಯ್‌ ಪ್ರಕಾಶ್‌, ನಟಿಯರಾದ ರಾಧಿಕಾ ಪಂಡಿತ್‌, ಹರ್ಷಿಕಾ ಪೂಣಚ್ಚ ಸೇರಿದಂತೆ ಸಿನಿಮಾರಂಗದ ಹಲವು ಮಂದಿ ಈ ಸಮಾರಂಭದಲ್ಲಿ ಪಾಲ್ಗೊಂಡು, ನವಜೋಡಿಯನ್ನು ಹರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top