fbpx
ಸಮಾಚಾರ

ಶಾ ಕಾರ್ಯಕ್ರಮದಲ್ಲಿ ಹಿಂದಿ ಮೆರವಣಿಗೆ: ಕನ್ನಡ ಕಡೆಗಣಿಸಿದವರ ವಿರುದ್ಧ ಕ್ರಮಕ್ಕೆ ಜೆ.ಸಿ. ಚಂದ್ರಶೇಖರ್‌ ಒತ್ತಾಯ

ಶಿವಮೊಗ್ಗದಲ್ಲಿ ಅಮಿತ್ ಶಾ ಉದ್ಘಾಟನೆ ನಡೆಸಿದ ಕಾರ್ಯಕ್ರಮದಲ್ಲಿ ಕನ್ನಡವನ್ನು ಅವಗಣಿಸಿ ಹಿಂದಿ ಭಾಷೆಯನ್ನು ಮಾತ್ರ ಬಳಸಿರುವ ವಿರುದ್ಧ ಕನ್ನಡಿಗರ ಆಕ್ರೋಶ ಬುಗಿಲೆದ್ದಿದೆ. ಭದ್ರಾವತಿ ಸಮೀಪ ರಾಜ್ಯ ಸರ್ಕಾರದ ವತಿಯಿಂದ ನಡೆದ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಸ್ಥಾಪನೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿ ಹಿಂದಿಯಲ್ಲಿ ಬ್ಯಾನರ್, ನಿರೂಪಣೆ ಸೇರಿದಂತೆ ಇಡೀ ಕಾರ್ಯಕ್ರಮ ನಡೆಸಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದ್ದು ಹಿಂದಿಯ ಗುಲಾಮಗಿರಿಯನ್ನು ಮಾಡಬೇಡಿ ಎಂದು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸುತ್ತಿದ್ದಾರೆ..

ಈ ಮದ್ಯೆ ಸಂಸದ ಜಿಸಿ ಚಂದ್ರಶೇಖರ್ ಅವರು ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಕನ್ನಡ ವಿರೋಧಿ ನಡೆಯನ್ನು ಕಟುವಾಗಿ ಖಂಡಿಸಿರುವ ಸಂಸದ ಜಿಸಿ ಚಂದ್ರಶೇಖರ್ ಅವರು ಹಿಂದಿ ಹೇರಿಕೆ ಮತ್ತು ಕನ್ನಡ ಕಡೆಗಣನೆಗೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪತ್ರ ಬರೆಯುವ ಮೂಲಕ ಆಗ್ರಹಿಸಿದ್ದಾರೆ.

 

 

ಜಿಸಿ ಚಂದ್ರಶೇಖರ್ ಅವರ ಪಾತ್ರದ ಸಾರಾಂಶ ಇಂತಿದೆ:
“ಅದಾಗ್ಯೂ, ಈ ಹಿಂದೆ ಗೃಹ ಸಚಿವರು ತಮಿಳು ನಾಡಿಗೆ ಭೇಟಿ ಕೊಟ್ಟಿದ್ದಾಗ ತಮಿಳು ಭಾಷೆಯ ಫಲಕಗಳು, ಫ್ಲೆಕ್ಸ್‌ ಬೋರ್ಡ್‌ ಗಳು ಹಾಗೆ ಮಧ್ಯಪ್ರದೇಶದ ಭೇಟಿಯ ಸಮಯದಲ್ಲಿ ಹಿ೦ದಿ ಭಾಷೆಯ ಫಲಕಗಳು, ಫ್ಲೆಕ್ಸ್‌ ಬೋರ್ಡ್‌ ಗಳನ್ನು ರಾರಾಜಿಸಿ ಅವರ ಮಾತೃಭಾಷೆಯ ಮಹತ್ವವನ್ನು ಮೆರೆದರು. ಆದರೆ, ಕನ್ನಡದ ಮುಕುಟಮಣಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕುವೆಂಪುರವರ ತವರು ಜಿಲ್ಲೆಯಾದ ಶಿವಮ್ಗೊಗ್ಗಕ್ಕೆ ಭೇಟಿ ಕೊಟ್ಟಾಗ ಭಾಷೆ ಸೂಕ್ಷ ವಿಚಾರವಾಗಿದ್ದರು ಈಗಾಗಲೇ ರಾಜ್ಯ ಪಾಲಿಸುತ್ತಿರುವ ತ್ರಿಭಾಷಾ ಸೂತ್ರವನ್ನೇ ಮರೆತು ಕೇಂದ್ರಗಳ ವಲಯಗಳಲ್ಲಿ ರಾಜ್ಯ ಮೂರನೇ ಸಾಲಿನಲ್ಲಿ ಸೇರುತ್ತವೆ ಎ೦ಬುದನ್ನು ಮರೆತು ಒಂದು ರಾಜಕೀಯ ಪಕ್ಷದ ಖಾಸಗಿ ಕಾರ್ಯಕ್ರಮದಂತೆ ಕೇಂದ್ರ ‘ನಾಯಕರನ್ನು ಮೆಚ್ಚಿಸಲು ಕನ್ನಡವನ್ನು ಕಡೆಗಣಿಸಿ ಕೇವಲ ಹಿಂದಿ ಭಾಷೆಯ ಫಲಕಗಳನ್ನು ಮೆರೆಸಿ ಕನ್ನಡಿಗರ ಸ್ವಾಭಿಮಾನವನ್ನು ಕಣತಿದ್ದೀರಿ.”

 

 

“ಈಗಾಗಲೇ ಎಷ್ಟೋ ವಿಚಾರಗಳಾದ ನಾಡು, ನುಡಿ! ಗಡಿ ವಿಚಾರಗಳಿಗೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರರ ಪರ ಸರ್ಕಾರ ನಿಲ್ಲದೆ ಇರುವುದು ದುರ್ದೈವದ ಸಂಗತಿ. ಇದೆ ರೀತಿಯ ಆನೆ ನಡೆದದ್ದೇ ದಾರಿ ಎಂಬ ಧೋರಣೆ ಪ್ರಜಾಪ್ರಭುತ್ವದಲ್ಲಿ ಸಲ್ಲದು, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಹಾಗೂ ತಮ್ಮ ಸರ್ಕಾರ ಅಧಿಕಾರ ನಡೆಸುತ್ತಿರುವುದು ಸ್ವಾಭಿಮಾನಿ ಕನ್ನಡ ಮತಬಾ೦ಧವರಿಂದಲೇ ಎಂಬುದನ್ನು ಮರೆಯಬಾರದು, ಈಗಾಗಲೇ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿಚಾರ ವಿಕೋಪಕ್ಕೆ ಹೋಗುತ್ತಿದ್ದು ಇದು ಗಾಯದ ಮೇಲೆ ಬರೆ ಎಳೆದಂತೆ ಆಗುವುದಿಲ್ಲವೆ, ಇದು 7.5 ಕೋಟಿ ಕನ್ನಡಿಗರ ಸರ್ಕಾರವೇ ಹೊರತು ಹಿಂದಿ ಭಾಷಿಕರ ಸರ್ಕಾರವಲ್ಲ ಆದುದರಿಂದ ನಾಡು, ನುಡಿ, ಗಡಿಯನ್ನು ಕಾಪಾಡಬೇಕಾದ ಸರ್ಕಾರಗಳೇ ಈ ರೀತಿ ವರ್ತಿಸುವುದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯ ನಡೆಯದಂತೆ ಕನ್ನಡಿಗರ ಹಿತ ಕಾಯಬೇಕೆಂದು ಕೋರುತ್ತೇನೆ.” ಎಂದು ಚಂದ್ರಶೇಖರ್ ಅವರು ತಮ್ಮ ಪತ್ರದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top