fbpx
ಸಮಾಚಾರ

ಜನವರಿ 18: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 19, 2021 ಮಂಗಳವಾರ
ವರ್ಷ : 1942 ಶಾರ್ವರಿ
ತಿಂಗಳು : ಪುಷ್ಯ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಷಷ್ಠೀ 10:58 am
ನಕ್ಷತ್ರ : ಉತ್ತರಾ ಭಾದ್ರ 9:54 am
ಯೋಗ : ಶಿವ 6:48 pm
ಕರಣ : ತೈತುಲ 10:58 am ಗರಿಜ 12:02 am

Time to be Avoided
ರಾಹುಕಾಲ : 3:20 pm – 4:45 pm
ಯಮಗಂಡ : 9:40 am – 11:05 am
ದುರ್ಮುಹುರ್ತ : 9:06 am – 9:51 am, 11:14 pm – 12:05 am
ವಿಷ : 11:15 pm – 1:02 am
ಗುಳಿಕ : 12:30 pm – 1:55 pm

Good Time to be Used
ಅಮೃತಕಾಲ : Nil
ಅಭಿಜಿತ್ : 12:07 pm – 12:53 pm

Other Data
ಸೂರ್ಯೋದಯ : 6:46 am
ಸುರ್ಯಾಸ್ತಮಯ : 6:14 pm
ರವಿರಾಶಿ : ಮಕರ
ಚಂದ್ರರಾಶಿ : ಮೀನ

 

 

 

ಮೇಷ (Mesha)

ಗಟ್ಟಿ ಮನೋಭಾವ ಬೆಳೆಸಿಕೊಳ್ಳಿರಿ. ಮನೋರಂಜನೆಗಾಗಿ ಯೋಚಿಸುವ ಕಾಲವಲ್ಲ. ಷೇರು ಬಜಾರಿನಲ್ಲಿ ಹಣ ಹೂಡಿಕೆಯಿಂದ ಭವಿಷ್ಯದಲ್ಲಿ ನಿರಾಶೆ ಉಂಟಾಗುವ ಸಾಧ್ಯತೆ ಇದೆ. ಷೇರು ಶತ್ರುಗಳಿಂದ ಎಚ್ಚರಿಕೆ. ಸಂಗಾತಿಯೊಡನೆ ವಿರಸ ಬೇಡ.

 

ವೃಷಭ (Vrushabha)

ಭವಿಷ್ಯದ ಹೊಸ ಯೋಜನೆಗಳಿಗೆ ಇಂದು ಒಳ್ಳೆಯ ಸಮಯ. ಗುರುಗಳ ಆಶೀರ್ವಾದ ನಿಮಗೆ ಇರುವುದು. ವ್ಯವಹಾರದಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ.

 

ಮಿಥುನ (Mithuna)

ಹೊಸ ಸಂಬಂಧ ಅಥವಾ ಗೆಳೆತನದಿಂದ ಮನಸ್ಸು ಹಕ್ಕಿಯಂತೆ ಹಾರಾಡುವುದು. ನಿಮ್ಮ ಅನುಭವದ ನುಡಿಗಳನ್ನು ಅವರು ಆಲಿಸುವುದರಿಂದ ಮಾನಸಿಕ ದುಗುಡ ಕಡಿಮೆ ಆಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಕರ್ಕ (Karka)

ಆಗಿ ಹೋದ ಕಹಿ ಘಟನೆಗಳನ್ನು ಮೆಲುಕು ಹಾಕುವುದರಲ್ಲಿ ಅರ್ಥವಿಲ್ಲ. ಗುರುವಿನ ಬೆಂಬಲವಿರುವುದರಿಂದ ಸಕಾರಾತ್ಮಕವಾಗಿ ಚಿಂತಿಸಿ ಯಶಸ್ಸನ್ನು ಹೊಂದಿರಿ. ಕೌಟುಂಬಿಕ ವಿಷಯಗಳನ್ನು ಅತಿರೇಕಕ್ಕೆ ಒಯ್ಯುವುದು ಒಳ್ಳೆಯದಲ್ಲ.

 

ಸಿಂಹ (Simha)

 ನಿಮ್ಮ ವೃತ್ತಿ ಹಾಗೂ ವ್ಯಾಪಾರದಲ್ಲಿ ತೊಡಕು ಸಹಜವಾಗಿದ್ದರೂ ಅದರಿಂದ ಹೆಚ್ಚಿನ ಹಾನಿ ಇಲ್ಲ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಹಕಾರವಿರುತ್ತದೆ. ಅವಸರವು ಕೆಲಸವನ್ನು ಕೆಡಿಸಿದರೆ ಸಂಯಮವು ಕಾರ್ಯದಲ್ಲಿ ಯಶಸ್ಸು ನೀಡುತ್ತದೆ.

 

ಕನ್ಯಾರಾಶಿ (Kanya)

ಶುಭಕಾರ್ಯಗಳಿಗೆ ಇಂದು ಸೂಕ್ತ ದಿನವಾಗಿದೆ. ಆಲಸ್ಯತನ ಮಾಡದೆ ಹಮ್ಮಿಕೊಂಡ ಕಾರ್ಯಗಳನ್ನು ಆರಂಭಿಸಿರಿ. ಹಿರಿಯರ ಮತ್ತು ಸಹೋದ್ಯೋಗಿಗಳ ಬೆಂಬಲ ದೊರೆಯುವುದು. ಹಣವನ್ನು ನೀರಿನಂತೆ ಖರ್ಚು ಮಾಡುವುದು ಉತ್ತಮವಲ್ಲ.

 

ತುಲಾ (Tula)

ನಿಮ್ಮ ಒಳ್ಳೆಯತನವು ಈ ದಿನ ಮತ್ತೊಮ್ಮೆ ಸಾಬೀತಾಗುವುದು. ನೆರೆಹೊರೆಯವರಿಗೆ ಸ್ನೇಹದ ಹಸ್ತ ಚಾಚುವಿರಿ. ಮನೆಯಲ್ಲಿನ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವುದರಿಂದ ಮಧ್ಯಾಹ್ನ ವೇಳೆಗೆ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುವುದು.

 

ವೃಶ್ಚಿಕ (Vrushchika)

ಕೆಲವು ಸಂಬಂಧಗಳು ಯಾಕೆ ದೂರವಾಗುತ್ತವೆ ಎಂದು ತಿಳಿಯುವುದಿಲ್ಲ. ಈ ಬಗ್ಗೆ ನೀವೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜಯ ಸಿಗುತ್ತದೆ.

 

ಧನು ರಾಶಿ (Dhanu)

ಧನಾತ್ಮಕ ಚಿಂತನೆಯಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ವಿರೋಧಿಗಳಿಗೆ ಮುಖಭಂಗವಾಗುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ತೊಂದರೆಯನ್ನು ಎದುರಿಸಬೇಕಾಗುವುದು. ಮನೆ ವೈದ್ಯರ ಸಲಹೆ ಪಡೆಯಿರಿ.

 

ಮಕರ (Makara)

ದಿಢೀರ್‌ ಪ್ರಯಾಣ ಹೋಗುವ ಸಾಧ್ಯತೆ ಇದ್ದು, ಇದಕ್ಕಾಗಿ ಧಾವಂತ ಬೇಡ. ಪ್ರಯಾಣದ ಪೂರ್ವಾಪರಗಳನ್ನು ತಿಳಿದು ಪ್ರಯಾಣ ಬೆಳೆಸಿದಲ್ಲಿ ಅನುಕೂಲವಾಗುವುದು. ಮಾರ್ಗ ಮಧ್ಯೆ ಉಪಯೋಗಕ್ಕಾಗಿ ಸಾಕಷ್ಟು ಹಣ ನಿಮ್ಮ ಬಳಿಯಿರಲಿ.

 

ಕುಂಭರಾಶಿ (Kumbha)

ಶಾವಾದವು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈ ದಿನ ಶುಭವಾರ್ತೆಯನ್ನು ಕೇಳುವಿರಿ. ಬಂಧು ಭಗಿನಿಯರ ಸೌಖ್ಯ, ಭಾಗ್ಯವೃದ್ಧಿ. ಆಂಜನೇಯ ಸ್ತೋತ್ರ ಪಠಿಸಿರಿ.

 

ಮೀನರಾಶಿ (Meena)

ಕಾರ್ಯಸ್ಥಾನದಲ್ಲಿ ಎಚ್ಚರಿಕೆಯಿಂದ ಇರಿ. ಅತಿಶಯ ಖರ್ಚು ಬರುವುದು. ಬಂಧು ಬಳಗದವರ ಭೇಟಿಯಾಗುವುದು. ಸ್ತ್ರೀಸೌಖ್ಯ. ಆದರೆ ಕೌಟುಂಬಿಕ ವಿರಸ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top