fbpx
ಸಮಾಚಾರ

ಜನವರಿ 22: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 22, 2021 ಶುಕ್ರವಾರ
ವರ್ಷ : 1942 ಶಾರ್ವರಿ
ತಿಂಗಳು : ಪುಷ್ಯ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ನವಮೀ 6:28 pm
ನಕ್ಷತ್ರ : ಭರಣಿ 6:40 pm
ಯೋಗ : ಶುಭ 9:19 pm
ಕರಣ : ಕುಲವ 6:28 pm ತೈತುಲ 

Time to be Avoided
ರಾಹುಕಾಲ : 11:06 am – 12:31 pm
ಯಮಗಂಡ : 3:21 pm – 4:47 pm
ದುರ್ಮುಹುರ್ತ : 9:06 am – 9:52 am, 12:54 pm – 1:39 pm
ವಿಷ : Nil
ಗುಳಿಕ : 8:15 am – 9:40 am

Good Time to be Used
ಅಮೃತಕಾಲ : 1:15 pm – 3:03 pm
ಅಭಿಜಿತ್ : 12:08 pm – 12:54 pm

Other Data
ಸೂರ್ಯೋದಯ : 6:46 am
ಸುರ್ಯಾಸ್ತಮಯ : 6:16 pm
ರವಿರಾಶಿ : ಮಕರ
ಚಂದ್ರರಾಶಿ : ಮೇಷ upto 25:25+

 

 

 

ಮೇಷ (Mesha)

ಉದ್ಯೋಗದಲ್ಲಿ ಸ್ಥಿರತೆ, ಕುಟುಂಬದ ವಾತಾವರಣವು ಚೇತೋಹಾರಿಯಾಗಿರುತ್ತದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಮನ್ನಣೆ ಆಗುವುದು.

 

ವೃಷಭ (Vrushabha)

ಆಶಾವಾದವು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈ ದಿನ ಶುಭವಾರ್ತೆಯನ್ನು ಕೇಳುವಿರಿ. ಬಂಧು ಭಗಿನಿಯರ ಸೌಖ್ಯ, ಭಾಗ್ಯವೃದ್ಧಿ. ಆಂಜನೇಯ ಸ್ತೋತ್ರ ಪಠಿಸಿರಿ.

 

ಮಿಥುನ (Mithuna)

ಧನಾತ್ಮಕ ಚಿಂತನೆಯಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ವಿರೋಧಿಗಳಿಗೆ ಮುಖಭಂಗವಾಗುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ತೊಂದರೆಯನ್ನು ಎದುರಿಸಬೇಕಾಗುವುದು. ಮನೆ ವೈದ್ಯರ ಸಲಹೆ ಪಡೆಯಿರಿ.

 

ಕರ್ಕ (Karka)

ಗಟ್ಟಿ ಮನೋಭಾವ ಬೆಳೆಸಿಕೊಳ್ಳಿರಿ. ಮನೋರಂಜನೆಗಾಗಿ ಯೋಚಿಸುವ ಕಾಲವಲ್ಲ. ಷೇರು ಬಜಾರಿನಲ್ಲಿ ಹಣ ಹೂಡಿಕೆಯಿಂದ ಭವಿಷ್ಯದಲ್ಲಿ ನಿರಾಶೆ ಉಂಟಾಗುವ ಸಾಧ್ಯತೆ ಇದೆ. ಷೇರು ಶತ್ರುಗಳಿಂದ ಎಚ್ಚರಿಕೆ. ಸಂಗಾತಿಯೊಡನೆ ವಿರಸ ಬೇಡ.

 

ಸಿಂಹ (Simha)

ನಿಮ್ಮ ವೃತ್ತಿ ಹಾಗೂ ವ್ಯಾಪಾರದಲ್ಲಿ ತೊಡಕು ಸಹಜವಾಗಿದ್ದರೂ ಅದರಿಂದ ಹೆಚ್ಚಿನ ಹಾನಿ ಇಲ್ಲ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಹಕಾರವಿರುತ್ತದೆ. ಅವಸರವು ಕೆಲಸವನ್ನು ಕೆಡಿಸಿದರೆ ಸಂಯಮವು ಕಾರ್ಯದಲ್ಲಿ ಯಶಸ್ಸು ನೀಡುತ್ತದೆ.

 

ಕನ್ಯಾರಾಶಿ (Kanya)

ಭವಿಷ್ಯದ ಹೊಸ ಯೋಜನೆಗಳಿಗೆ ಇಂದು ಒಳ್ಳೆಯ ಸಮಯ. ಗುರುಗಳ ಆಶೀರ್ವಾದ ನಿಮಗೆ ಇರುವುದು. ವ್ಯವಹಾರದಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ.

 

ತುಲಾ (Tula)

ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ನಿಧಾನ ಪ್ರವೃತ್ತಿಯು ಕಂಡು ಬರುವುದು. ಕೆಲದಿನಗಳ ನಂತರ ಪ್ರಗತಿ ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ತೋರುವುದು.

 

ವೃಶ್ಚಿಕ (Vrushchika)

ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಹಮ್ಮಿಕೊಂಡ ಕಾರ್ಯಗಳಲ್ಲಿ ಈ ದಿನ ವಿಘ್ನಗಳು ಬಹಳ. ಕೈಕೆಳಗಿನ ಕೆಲಸಗಾರರು ಮುಷ್ಕರ ಹೂಡುವ ಸಾಧ್ಯತೆ. ಕಾರ್ಮಿಕ ವರ್ಗದವರ ವಿಶ್ವಾಸ ಗಳಿಸಿರಿ. ಮುಂದಿನ ದಿನಗಳು ಉತ್ತಮವಾಗಿರುವುದು.

 

ಧನು ರಾಶಿ (Dhanu)

ಹೊಸ ಸಂಬಂಧ ಅಥವಾ ಗೆಳೆತನದಿಂದ ಮನಸ್ಸು ಹಕ್ಕಿಯಂತೆ ಹಾರಾಡುವುದು. ನಿಮ್ಮ ಅನುಭವದ ನುಡಿಗಳನ್ನು ಅವರು ಆಲಿಸುವುದರಿಂದ ಮಾನಸಿಕ ದುಗುಡ ಕಡಿಮೆ ಆಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮಕರ (Makara)

ಉದ್ಯೋಗದಲ್ಲಿ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ. ಮನೆ ಮಾಲಿಕರ ಕಿರಿಕಿರಿಗೆ ಬೇಸತ್ತು ಬೇರೆ ಮನೆಯ ಹುಡುಕಾಟಕ್ಕೆ ತೊಡಗುವಿರಿ. ಮಿತ್ರರ ಹಾಗೂ ಬಂಧುಗಳ ಮಧ್ಯಸ್ಥಿಕೆಯಿಂದ ವಾತಾವರಣ ತಿಳಿಗೊಳ್ಳುವುದು.

 

ಕುಂಭರಾಶಿ (Kumbha)

ಆತ್ಮವಿಶ್ವಾಸ ಹೆಚ್ಚಿರುವುದರಿಂದ ಇನ್ನೊಬ್ಬರ ಬಳಿ ಹೇಳಿ ಕೆಲಸ ಮಾಡಿಸುವಿರಿ. ಉತ್ತಮ ನಾಯಕನ ಗುಣ ತೋರುವುದರಿಂದ ಸಂತಸ ಸಿಗುವುದು. ಉದ್ಯೋಗ-ನೌಕರಿಯಲ್ಲಿ ಪ್ರಗತಿ. ವಾದ ಸ್ಪರ್ಧೆಯಲ್ಲಿ ಯಶಸ್ಸು. ದೂರದ ಪ್ರವಾಸಗಳನ್ನು ಹಮ್ಮಿಕೊಳ್ಳುವಿರಿ.

 

ಮೀನರಾಶಿ (Meena)

ನಿಮ್ಮ ಹೃದಯದ ಮಾತುಗಳನ್ನು ಹಿಡಿತದಲ್ಲಿಡಿ. ಈಗ ನೀವು ಜವಾಬ್ದಾರಿಯುತ ಸ್ಥಾನದಲ್ಲಿರುವಿರಿ ಎಂಬುದನ್ನು ಮರೆಯದಿರಿ. ನಿಮ್ಮ ನಡೆ-ನುಡಿಗಳನ್ನು ಇತರೆಯವರು ಗಂಭೀರವಾಗಿ ಪರಿಗಣಿಸುವರು. ಹಾಗಾಗಿ ಘನತೆ ಗಾಂಭೀರ್ಯದಿಂದ ವರ್ತಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top