fbpx
ಸಮಾಚಾರ

ಮಗಳು ಹುಟ್ಟಿದ ಬಳಿಕ ಮೊದಲಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು ವಿರಾಟ್- ಅನುಷ್ಕಾ: ಪುಟ್ಟ ಕಂದಮ್ಮನೆಲ್ಲಿ..?

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ದಂಪತಿ ಜನವರಿ 11ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿನ ತಂದೆಯಾಗಿರುವ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು.

 

 

ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪೋಷಕರಾದ ನಂತರ ಮೊದಲ ಸಲ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಮಗಳೊಂದಿಗೆ ಕ್ಲಿನಿಕ್​ಗೆ ಬಂದಿದ್ದ ವಿರುಷ್ಕಾ ದಂಪತಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಪುಟ್ಟ ಕಂದ ಮಾತ್ರ ಜೊತೆಗಿರಲಿಲ್ಲ.

 

 

ಬ್ಲಾಕ್ ಕಾರಿನ ಮುಂದೆ ಬ್ಲಾಕ್‌ ಡ್ರೆಸ್‌ನಲ್ಲಿದ್ದ ಕೊಹ್ಲಿ ವೈಟ್ ಶೂಸ್ ಧರಿಸಿದ್ದರು. ಅನುಷ್ಕಾ ಶರ್ಮಾ ಬ್ಲೂ ಜೀನ್ಸ್‌ಗೆ ವೈಟ್ ಮಾಸ್ಕ್, ಶೂಸ್ ಧರಿಸಿ ಕೂದಲು ಫ್ರೀ ಬಿಟ್ಟಿದ್ದರು. ವಿರಾಟ್ ಅನುಷ್ಕಾ ಜೋಡಿ ಮಾಧ್ಯಮ ಛಾಯಾಚಿತ್ರಕಾರರ ಮುಂದೆ ಥಂಬ್ಸ್ ಅಪ್ ಮಾಡಿದ್ದಾರೆ.

ಅಂದಹಾಗೆ ಅನುಷ್ಕಾ ಹೆರಿಗೆ ನಿಮಿತ್ತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ ವಿರಾಟ್​ ಕೊಹ್ಲಿ, ತಮಗೆ ಮಗಳು ಹುಟ್ಟಿದ ವಿಷಯವನ್ನು ಟ್ವಿಟರ್​ ಮೂಲಕ ಹಂಚಿಕೊಂಡಿದ್ದರು. ನಮ್ಮ ಜೀವನದ ಹೊಸ ಅಧ್ಯಾಯ ಇಂದಿನಿಂದ ಶುರುವಾಯಿತು ಎಂದು ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top