fbpx
ಸಮಾಚಾರ

ಲಸಿಕೆ ಮೇಲೆ ವೈದ್ಯರಿಗೆ ನಂಬಿಕೆ ಇಲ್ಲವೇ? ಕೋವಿಡ್ ಲಸಿಕೆ ಪಡೆದುಕೊಂಡಂತೆ ವೈದ್ಯಾಧಿಕಾರಿಗಳಿಂದ ನಟನೆ: ವಿಡಿಯೋ ವೈರಲ್

ಕೊರೋನ ನಿಯಂತ್ರಣ ಲಸಿಕೆ ನೀಡುವ ಅಭಿಯಾನ ದೇಶಾದ್ಯಂತ ಈಗಾಗಲೇ ಆರಂಭವಾಗಿದ್ದು, ಅದರಂತೆ ತುಮಕೂರು ನಗರದಲ್ಲೂ ವಾಕ್ಸಿನ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆದರೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಲಸಿಕೆ ಪಡೆಯುತ್ತಿರುವಂತೆ ನಟನೆ ಮಾಡಿದ್ದಾರೆನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.

 

 

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರಕಾರ ಬಿಡುಗಡೆ ಮಾಡಿರುವ ಕೊರೊನಾ ವ್ಯಾಕ್ಸಿನ್ ಅನ್ನು ಡಿಎಚ್‌ಒ ನಾಗೇಂದ್ರಪ್ಪ, ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಯವರು ಲಸಿಕೆ ತೆಗೆದುಕೊಳ್ಳುವ ನಾಟಕವಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಕಳೆದ ಜ.16ರಂದು ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ವಾರಿಯರ್ಸ್ ಗೆ ವ್ಯಾಕ್ಸಿನ್ ನೀಡುವ ಕಾಯ್ರಕ್ರಮಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಇದೇ ವೇಳೆ ಡಿಎಚ್‌ಒ ಡಾ.ನಾಗೇಂದ್ರಪ್ಪ ಅವರು ಇಂಜೆಕ್ಷನ್ ತುಂಬಿದ ಸೂಜಿಯನ್ನು ಚುಚ್ಚಿಕೊಳ್ಳುತ್ತಿರುವಂತೆ ಪೋಸ್ ನೀಡಿ ನಾಟಕವಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿದ್ದು ಮಾದರಿಯಾಗಬೇಕಿದ್ದ ಡಿಎಚ್ಒ ನಾಗೇಂದ್ರಪ್ಪ ಮತ್ತು ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ಅವರುಗಳು ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ಇಡೀ ಸಮಾಜಕ್ಕೆ ಧೈರ್ಯ ತುಂಬಬೇಕಾಗಿತ್ತು. ಆದರೆ, ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಪೋಸ್ ನೀಡಿ ಇಡೀ ಇಲಾಖೆಗೆ ಮೋಸ ಮಾಡಿರುವ ಇವರ ವಿರುದ್ಧ ಮೇಲಧಿಕಾರಿಯವರು ಸೂಕ್ತ ಕ್ರಮ ಕೈಗೊಂಡು ಅಮಾನತ್ತು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top