fbpx
ಸಮಾಚಾರ

“ಹೆಸರಿನ ಪಕ್ಕ ಯಾವ ನಟನ ಸೇರಿಸಿಕೊಳ್ಳಬೇಡಿ” ಯುವಜನತೆಗೆ ಜಗ್ಗೇಶ್ ಭಾವುಕ ಸಂದೇಶ

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಇದೀಗ ಜಗ್ಗೇಶ್ ಯುವಜನತೆಗೊಂದು ಭಾವುಕ ಸಂದೇಶ ನೀಡಿದ್ದಾರೆ.

50ನೇ ಹುಟ್ಟುಹಬ್ಬದ ದಿನ ತಂದೆ ಜೊತೆ ಸೆರೆ ಹಿಡಿದ ಕೊನೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ನಟ ಜಗ್ಗೇಶ್ ಶೇರ್ ಅಪ್ಲೋಡ್ ಮಾಡಿದ್ದಾರೆ. ನೆನಪುಗಳನ್ನು ಹಂಚಿಕೊಳ್ಳುತ್ತಾ ಮುಂದಿನ ಪೀಳಿಗೆಗೆ ಬುದ್ಧಿ ಮಾತು ಹೇಳಿದ್ದಾರೆ.

 

 

ಜಗ್ಗೇಶ್ ಫೋಸ್ಟ್:
‘ಅಪ್ಪನ ಜೊತೆ ತೆಗೆಸಿಕೊಂಡ, ಕೊನೇ ಚಿತ್ರ .ಇದು ನನ್ನ 50ನೇ ಹುಟ್ಟು ಹಬ್ಬದ ಸಂದರ್ಭ. ಮಗನ ಹುಟ್ಟುಹಬ್ಬ ಬಂದರೆ ಬೆಳಗಿನ ಜಾವ 5 ಗಂಟೆಗೇ ಮನೆ ಮುಂದೆ ಇರುತ್ತಿದ್ದರು ಅಪ್ಪ. ಪ್ರತಿಯೊಬ್ಬ ತಂದೆಗೂ ತನ್ನ ಬೆಳವಣಿಗೆಗಿಂತ ತನ್ನ ಮಕ್ಕಳು ಸಾಧಿಸಿಬಿಟ್ಟರೆ, ಆಗುವ ಆನಂದ ಬ್ರಹ್ಮಾನಂದ. ಆ ವಿಷಯದಲ್ಲಿ ನಾನು ಅಪ್ಪನಿಗೆ ಹೆಮ್ಮೆ ಪಡುವಂತೆ ರಾಯರ ದಯೆಯಿಂದ ಬೆಳೆದು, ಅಪ್ಪನ ಹಾಗೂ ವಂಶದ ಗೌರವ ಹೆಚ್ಚಿಸಿದೆ. ಯಾಕೆ ಜನ್ಮ ಕೊಟ್ಟ ತಂದೆಗೆ ತಮ್ಮ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಎಂದರೆ, ಮಗ ಗೆದ್ದರೆ ತಾನು ಗೆದ್ದಂತೆ. ತನ್ನ ವಂಶ ಗೆದ್ದಂಥ ಭಾವ ಅವರಿಗೆ,’ ಎಂದು ಬರೆದುಕೊಂಡಿದ್ದಾರೆ.

ಹೆಸರಿನ ಪಕ್ಕ ಯಾವ ನಟನ ಸೇರಿಸಿಕೊಳ್ಳಬೇಡಿ
‘ಎಲ್ಲಾ ಯುವ ಸಮಾಜಕ್ಕೆ ನನ್ನ ಸಂದೇಶವಿದು. ದಯಮಾಡಿ ಎಷ್ಟೇ ಶ್ರಮವಾದರೂ, ಅಪಮಾನವಾದರೂ, ಅವಮಾನವಾದರೂ ಸಹಿಸಿ ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೇ ಜೀವನ ಗೆದ್ದು ಅಪ್ಪನಿಗೆ ಹೆಮ್ಮೆ ಪಡುವಂತೆ ಮಾಡಿಬಿಡಿ. ಆಗ ನಿಮ್ಮ ಮಕ್ಕಳು ನಿಮ್ಮ ಹೆಸರು ಉಳಿಸುವ ಯೋಗ ರಾಯರು ನೀಡುತ್ತಾರೆ. ನಾವು ನಡೆದು ಕೊಂಡಂತೆ ನಮ್ಮ ಮುಂದಿನ ಪೀಳಿಗೆ ಇರುತ್ತದೆ. ಜೊತೆಗೆ ನಿಮ್ಮ ಹೆಸರಿನ ಪಕ್ಕ ಅಪ್ಪನ ಹೆಸರು ಹೆಮ್ಮೆಯಿಂದ ಸೇರಿಸಿಕೊಳ್ಳಿ. ಅದರ ಖುಷಿಯೇ ಬೇರೆ. ಅದಕ್ಕೆ ನನ್ನ ಹೆಸರು ಜಗ್ಗೇಶ್ ಶಿವಲಿಂಗಪ್ಪ. ಯಾವುದೇ ಕಾರಣಕ್ಕೂ ನಿಮ್ಮ ಹೆಸರಿನ ಪಕ್ಕ ಯಾವ ನಟ, ನಟಿ ರಾಜಕಾರಣಿ ಹೆಸರು ಸೇರಿಸಬೇಡಿ. ಜನ್ಮ ಕೊಟ್ಟ ತಂದೆ ಒಳಗೊಳಗೇ ದುಃಖ ಪಡುತ್ತಾನೆ. ನೆನಪಿಡಿ ನಾವು ಏನೇ ಸಾಧಿಸಿದರೂ ಆ ಸಾಧನೆಗೆ ದೇಹ ಜೀವ ಉಸಿರು ಅಪ್ಪನ ಭಿಕ್ಷೆಯಿಂದಲೆ,’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top