fbpx
ಸಮಾಚಾರ

ವಾಟಾಳ್ ನಾಗರಾಜ್ ವಿರುದ್ಧ ಎಫ್.ಐ.ಆರ್ ದಾಖಲು

ಡಿಸೆಂಬರ್ 5ರಂದು ಟೌನ್‌ಹಾಲ್ ಮುಂದೆ ಪ್ರತಿಭಟನೆ ಕೈಗೊಂಡಿದ್ದ ವಾಟಳ್​ ನಾಗರಾಜ್,​ ಕೊವಿಡ್ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಪಾಲಿಸದ ಹಿನ್ನೆಲೆಯಲ್ಲಿ ದಂಡ ಪಾವತಿಸಲು ಕೋರ್ಟ್​ ಆದೇಶ ನೀಡಿತ್ತು. ಆದರೆ ಕೋರ್ಟ್​ ಆದೇಶದಂತೆ ದಂಡ ಪಾವತಿಸದ ವಾಟಾಳ್ ನಾಗರಾಜ್ ವಿರುದ್ಧ FIR​ ದಾಖಲು ಮಾಡಲಾಗಿದೆ.

ಡೌನ್‌ ನಿಯಮ ಜಾರಿಯಲ್ಲಿದ್ದರೂ 2020ರ ಡಿಸೆಂಬರ್‌ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು. ಈ ವೇಳೆ ಜನ ಗುಂಪು ಸೇರಿ ಸೋಂಕು ಹರಡುವ ಸನ್ನಿವೇಶ ನಿರ್ಮಾಣಕ್ಕೆ ಕಾರಣವಾದ ಆರೋಪದ ಮೇರೆಗೆ ಕೇಸ್‌ ದಾಖಲಿಸಲಾಗಿತ್ತು. ವಾಟಾಳ್‌ ನಾಗರಾಜ್‌ ಅವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲು ನ್ಯಾಯಾಲಯದಿಂದ ಆದೇಶವಾಗಿತ್ತು.

ದಂಡ ಕಟ್ಟುವಂತೆ ವಾಟಾಳ್ ನಾಗರಾಜ್ ಗೆ ಡಿಸೆಂಬರ್ 19 ರಂದು ಎಸ್.ಜೆ ಪಾರ್ಕ್ ಪೊಲೀಸ್ರು ಇದೇ ತಿಂಗಳ 21 ರ ಒಳಗಾಗಿ ದಂಡದ ಮೊತ್ತ ಪಾವತಿಸುವಂತೆ ಸೂಚಿಸಿ ನೋಟಿಸ್ ನೀಡಿದ್ರು. ಆದರೆ ಅವಧಿಯೊಳಗಡೆ ವಾಟಾಳ್ ನಾಗರಾಜ್ ದಂಡದ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top