fbpx
ಸಮಾಚಾರ

ಅಂದು ದಯಾಮರಣಕ್ಕೆ ಬೇಡಿಕೆ ಇಟ್ಟಿದ್ದರು ನಟಿ ಜಯಶ್ರೀ

ಬಿಗ್​ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್​ಮೆಂಟ್​ನಲ್ಲಿ ನೇಣುಬಿಗಿದುಕೊಂಡು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ಅವರು ಸಂಧ್ಯಾ ಕಿರಣ್​ ವೃದ್ಧಾಶ್ರಮಕ್ಕೆ ಸೇರಿದ ಬಗ್ಗೆ ಅವರ ಸ್ನೇಹಿತರಿಗೂ ಮಾಹಿತಿ ಇರಲಿಲ್ಲ. ಬಹಳ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ಈ ಹಿಂದೆಯೂ ದಯಾ ಮರಣಕ್ಕಾಗಿ ಬೇಡಿಕೆ ಇಟ್ಟಿದ್ದರು.

“ಕೆಲ ತಿಂಗಳುಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿನ ಕುರಿತು ಮಾತನಾಡಿದ್ದರು. ಆಸ್ಪತ್ರೆಯಿಂದಲೇ ಫೇಸ್ ಬುಕ್ ಲೈವ್ ವಿಡಿಯೋ ಮಾಡಿದ್ದ ಅವರು, ನಾನು ಹಣ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿಲ್ಲ. 5 ವರ್ಷ ವಯಸ್ಸಿನಲ್ಲಿಯೇ ನನ್ನ ಮೇಲೆ ದೌರ್ಜನ್ಯ ನಡೆದಿತ್ತು. ಹುಡುಗಿಯರಿಂದಲೂ ಲೈಂಗಿಕ ದೌರ್ಜನ್ಯ ನಡೆದಿದೆ. 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಬದುಕು ಸಾಕಾಗಿದೆ. ನನಗೆ ದಯಾಮರಣ ಕೊಡಿಸಿ ಎಂದು ಅವಲತ್ತುಕೊಂಡಿದ್ದರು.

ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದ ಜಯಶ್ರೀ, ‘ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಸ್ವಲ್ಪ ಸಮಯದ ನಂತರ ಆ ಪೋಸ್ಟನ್ನು ಡಿಲೀಟ್ ಮಾಡಿ, “ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ’ ಎಂದು ಮತ್ತೆ ಪೋಸ್ಟ್ ಮಾಡಿದ್ದರು. ಆಗ ನಟ ಸುದೀಪ್ ಅವರು ಜಯಶ್ರೀಗೆ ಧೈರ್ಯ ತುಂಬಿದ್ದರು. ನಂತರ ಸಮಾಧಾನಗೊಂಡಿದ್ದ ಜಯಶ್ರೀ ತಾನು ಆತ್ಮಹತ್ಯೆ ನಿರ್ಧಾರದಿಂದ ಹೊರಬಂದಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಮಾಗಡಿ ರಸ್ತೆಯ ವೃದ್ದಾಶ್ರಮವೊಂದರಲ್ಲಿ ಜಯಶ್ರೀ ರಾಮಯ್ಯ ನೇಣಿಗೆ ಶರಣಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top