fbpx
ಸಮಾಚಾರ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ: 556 ಹುದ್ದೆಗಳಿಗೆ ಅರ್ಜಿ ಅಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2021ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಹರಾದ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಫೆಬ್ರವರಿ 22, 2021ರೊಳಗೆ ಸಲ್ಲಿಸಬಹುದು.

ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಖಾಲಿ ಹುದ್ದೆಗಳ ವರ್ಗೀಕರಣವನ್ನು ಹಾಗೂ ಅರ್ಹತಾ ಷರತ್ತುಗಳಿಗೆ ಅಧಿಕೃತ ವೆಬ್‍ಸೈಟ್ www.recruitment.ksp.gov.in ನಲ್ಲಿನ ಅಧಿಸೂಚನೆ ಗಮನಿಸಬೇಕು. ಅರ್ಜಿ ಸಲ್ಲಿಸಲು ಫೆಬ್ರವರಿ 22 ಕಡೆಯ ದಿನವಾಗಿದೆ. ಅಧಿಕೃತ ಬ್ಯಾಂಕ್ ಶಾಖೆಗಳ/ಅಂಚೆ ಕಚೇರಿಯ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಫೆ. 24 ಕೊನೆಯ ದಿನಾಂಕವಾಗಿದೆ.

ಶುಲ್ಕ ವಿವರ
– ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.500.
– ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.500.
– ಎಸ್‌ಸಿ / ಎಸ್‌ಟಿ / ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.250.

ವೇತನ ಶ್ರೇಣಿ: ರೂ.37000-70850 ವರೆಗೆ.

ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.

ವಯೋಮಿತಿ ಅರ್ಹತೆ
– ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು.
– ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
– ಎಸ್‌ಸಿ / ಎಸ್‌ಟಿ / ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : www.recruitment.ksp.gov.in

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top