fbpx
ಸಮಾಚಾರ

ತಾಯಿಗೆ ಮದುವೆ ಮಾಡಿಸುವ ಯೋಚನೆಯಲ್ಲಿದ್ದರು ನಟಿ ಜಯಶ್ರೀ

ಬಿಗ್​ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್​ಮೆಂಟ್​ನಲ್ಲಿ ನೇಣುಬಿಗಿದುಕೊಂಡು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ಅವರು ಸಂಧ್ಯಾ ಕಿರಣ್​ ವೃದ್ಧಾಶ್ರಮಕ್ಕೆ ಸೇರಿದ ಬಗ್ಗೆ ಅವರ ಸ್ನೇಹಿತರಿಗೂ ಮಾಹಿತಿ ಇರಲಿಲ್ಲ. ಬಹಳ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ಚಿಕಿತ್ಸೆ ಪಡೆದು ಸಹಜ ಜೀವನದತ್ತ ಮರಳುವ ಪ್ರಯತ್ನದಲ್ಲಿದ್ದರು.

ಅಲ್ಲದೆ ಅಮ್ಮನಿಗೆ ಮತ್ತೆ ಮದುವೆ ಮಾಡುವ ಆಲೋಚನೆ ಸಹ ಮಾಡಿದ್ದರಂತೆ. ತನಗೆ ಮದುವೆಯಾದರೆ ಅಮ್ಮನ ಜೊತೆ ಯಾರು ಇರುತ್ತಾರೆ ಎಂದು ತಾಯಿಗೆ ಮದುವೆ ಮಾಡುವ ಪ್ರಯತ್ನದಲ್ಲಿದ್ದರಂತೆ. ಜೀವನದಲ್ಲಿ ಇಷ್ಟೆಲ್ಲ ಕನಸು ಕಂಡಿದ್ದ ಜಯಶ್ರೀ ಈಗ ಈ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ನಂಬಲಾಗುತ್ತಿಲ್ಲ.

ತಾನು ಮದುವೆಯಾಗುವ ಆಲೋಚನೆ ಸಹ ಇತ್ತಂತೆ. ಅದಕ್ಕೆ ತಮ್ಮ ಅಮ್ಮನಿಗೆ ಮೊದಲು ಮದುವೆ ಮಾಡಿ ನಂತರ ತನ್ನ ಮದುವೆ ಎಂದು ನಿರ್ಧರಿಸಿದ್ದಂತೆ. ತಾನು ಮದುವೆಯಾಗಿ ಹೋದರೆ, ಅಮ್ಮ ಒಂಟಿಯಾಗಬಾರದು ಎಂಬ ಉದ್ದೇಶದಿಂದ ಜಯಶ್ರೀ ಅಮ್ಮನ ಮದುವೆ ಬಗ್ಗೆ ತಲೆಕಡೆಸಿಕೊಂಡಿದ್ದರಂತೆ. ಈ ಬಗ್ಗೆ ಕಿಚ್ಚ ಸುದೀಪ್​ ಚಾರಿಟಬ್​ ಟ್ರಸ್ಟ್​ನ ಕಿಟ್ಟಿ ಅವರ ಬಳಿ ಹೇಳಿಕೊಂಡಿದ್ದರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top