fbpx
ಸಮಾಚಾರ

ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆ ರಾಯಭಾರಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಈಗಾಗಲೇ ಸಾಕಷ್ಟು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡದ ಖ್ಯಾತ ಚಲನಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೃಷಿ ಇಲಾಖೆ ರಾಯಭಾರಿಯಾಗಿ ಕಾರ್ಯ ಆರಂಭಿಸಲಿದ್ದಾರೆ. ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ಕೆಲಸ ಶುರುಮಾಡಲಿದ್ದಾರೆ.

ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್​​​ ಹಾಗೂ ದರ್ಶನ್​ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ, ಮೈಸೂರಿನ ದಚ್ಚು ಫಾರ್ಮ್​ ಹೌಸ್​ಗೆ ಬಿ.ಸಿ.ಪಾಟೀಲ್ ಭೇಟಿ ನೀಡಿದ್ದಾರೆ. ದರ್ಶನ್​ ಮತ್ತು ಕೌರವ ಪಾಟೇಲ್​ ಫೋಟೋಗಳು ಅಂತರ್ಜಾಲದಲ್ಲಿ ಅಲೆದಾಡುತ್ತಿವೆ. ಯಾವುದೇ ಸಂಭಾವನೆ, ಗೌರವ ಧನ ಪಡೆಯದೆ ರೈತರ ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್​ ನೇಮಕಗೊಂಡಿರೋದು ಡಿ ಫ್ಯಾನ್ಸ್​ ಅಭಿಮಾನಿಗಳಲ್ಲಿ ಸಂತಸವನ್ನ ಸೃಷ್ಟಿಮಾಡಿದೆ.

ದರ್ಶನ್​ ಅವರ ತೋಟದಲ್ಲಿ ಸುತ್ತಾಡಿರುವ ಸಚಿವ ಪಾಟೀಲ್​ ಅವರು ದರ್ಶನ್​ ಅವರಿಗೆ ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ಮನವಿ ಮಾಡಿದ್ದಾರಂತೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಮನವಿಯನ್ನು ಒಪ್ಪಿಕೊಂಡಿರುವ ದರ್ಶನ್​, ಶೀಘ್ರದಲ್ಲೇ ರೈತ ಪರ ಕಾರ್ಯಕ್ರಮಗಳಲ್ಲಿ ಸರ್ಕಾರದ ಮುಖವಾಗಲಿದ್ದಾರಂತೆ.

ರೈತ ಪರ ಕಾರ್ಯಕ್ರಮಗಳಲ್ಲಿ ಸರ್ಕಾರದ ಮುಖವಾಗಲಿರುವ ದರ್ಶನ್​ ಅವರು, ಶೀಘ್ರದಲ್ಲಿಯೇ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸದ್ಯದರಲ್ಲಿಯೇ ದಿನಾಂಕವೂ ಪ್ರಕಟಗೊಳ್ಳಲಿದೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top