fbpx
ಸಮಾಚಾರ

ಜಯಶ್ರೀ ಡೆತ್ ನೋಟ್ ಪತ್ತೆ: ಡೆತ್ ನೋಟ್ ನಲ್ಲಿ ಸಂಬಂಧಿಕರ ಬಳಿ ಜಯಶ್ರೀ ವಿಶೇಷ ಮನವಿ

ಬಿಗ್​ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್​ಮೆಂಟ್​ನಲ್ಲಿ ನೇಣುಬಿಗಿದುಕೊಂಡು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಜಯಶ್ರೀ ಶವ ಪತ್ತೆಯಾದ ರೂಮಿನಲ್ಲಿ ಒಂದು ಡೆತ್ ನೋಟ್, ಎರಡು ಡೈರಿ ಪುಸ್ತಕ, ಒಂದು ಫೋನ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾಲ‌ ಪಡೆದಿದ್ದವರಿಗೆ ಹಣ ಮರಳಿಸುವಂತೆ ಡೆತ್ ನೋಟ್ ನಲ್ಲಿ ನಟಿ ಜಯಶ್ರೀ ಬರೆದಿದ್ದಾರೆ.

ಜಯಶ್ರೀ ರಾಮಯ್ಯ ಅವರು ಡೆತ್‌ನೋಟ್‌ನಲ್ಲಿ ಮುಖ್ಯವಾಗಿ ಸಾಲ ತೀರಿಸುವ ಬಗ್ಗೆ ಬರೆದುಕೊಂಡಿದ್ದಾರೆ. ಯಾರು ಯಾರಿಗೆ ಎಷ್ಟು ಮೊತ್ತ ನೀಡಬೇಕು ಎಂದು ಹೆಸರು ಹಾಗೂ ಹಣದ ವಿವರ ಬರೆದಿದ್ದಾರೆ. ಸಾಲ‌ ಪಡೆದಿದ್ದವರಿಗೆ ಹಣ ಮರಳಿಸುವಂತೆ ಸಂಬಂಧಿಕರಿಗೆ ಮನವಿ ಮಾಡಿಕೊಂಡಿದ್ದಾರೆ..

ಜೊತೆಗೆ ರೂಮ್ ಬಾಡಿಗೆ, ರೂಮ್ ಮೇಟ್ ಬಳಿ ಪಡೆದಿದ್ದ ಸಾಲ, ವೈದ್ಯರಿಗೆ ಶುಲ್ಕ ಎಲ್ಲವನ್ನು ಪಾವತಿಸುವಂತೆ ಸೋದರ ಅಜಯ್ ಅವರಿಗೆ ಜಯಶ್ರೀ ಮನವಿ ಮನವಿ ಮಾಡಿಕೊಂಡು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top