fbpx
ಸಮಾಚಾರ

ಶತಕ ದತ್ತ ಪೆಟ್ರೋಲ್‌ ದರ: ಬೆಂಗಳೂರಿನಲ್ಲಿ ಪೆಟ್ರೋಲ್‌ ರೇಟ್‌ ಎಷ್ಟಿದೆ?

ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್‌ ದರ ಮಂಗಳವಾರ ಮತ್ತೊಮ್ಮೆ ಏರಿಕೆ ಕಂಡಿದೆ. ಕಳೆದ ವಾರದಲ್ಲಿ 4 ಬಾರಿ ಹೆಚ್ಚಳವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಮಟ್ಟಕ್ಕೇರಿತ್ತು. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವೆಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ದೇಶದ ಪ್ರಮುಖ ನಗರಗಳಲ್ಲಿ ಲೀಟರ್‌ ಪೆಟ್ರೋಲ್‌ ದರ ಹೀಗಿದೆ.
ದೆಹಲಿ – 86.05 ರು.
ಮುಂಬೈ- 92.62 ರು.
ಬೆಂಗಳೂರು- 88.95 ರು.
ಚೆನ್ನೈ- 88.60 ರು.
ಕೋಲ್ಕತಾ- 87.45 ರು.

ಇದೇ ವೇಳೆ ಡೀಸೆಲ್‌ ದರವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದೇಶದ ಪ್ರಮುಖ ನಗರದಲ್ಲಿ ಡೀಸೆಲ್‌ ದರ ಹೀಗಿದೆ.
ದೆಹಲಿ – 76.23 ರು.
ಮುಂಬೈ- 83.03 ರು.
ಬೆಂಗಳೂರು- 80.84 ರು.
ಚೆನ್ನೈ-81.47 ರು.
ಕೋಲ್ಕತಾ- 79.83 ರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top