ಕ್ರಿಕೆಟ್ ನಲ್ಲಿ ಆಗಾಗ್ಗೆ ಸಂಭವಿಸುವ ಕೆಲ ತಮಾಷೆಯೆನಿಸುವ ಎಡವಟ್ಟುಗಳು ಜನರನ್ನು ನಗೆಪಾಟಲಿಗೀಡಾಗುವಂತೆ ಮಾಡುತ್ತವೆ. ಇದೀಗ ಅಂಥಾ ಎಡವಟ್ಟುಗಳ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು ಇದಕ್ಕೆ ಸಂಭಂದಿಸಿದ ವಿಡಿಯೋವೊಂದು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದೇ ಎಸೆತದಲ್ಲಿ ಬ್ಯಾಟ್ಸ್ಮನ್ ಒಬ್ಬ 2 ಬಾರಿ ರನೌಟ್ ಆದ ಅಪರೂಪದ ಪ್ರಸಂಗ ಭಾನುವಾರ ಆಸ್ಪ್ರೇಲಿಯಾದ ಬಿಗ್ಬ್ಯಾಶ್ ಟಿ20ಯಲ್ಲಿ ನಡೆದಿದೆ. ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಬ್ಯಾಟ್ಸ್ಮನ್ ಜ್ಯಾಕ್ ವೀಥರಾಲ್ಡ್ 2 ಬಾರಿ ರನೌಟ್ ಆದ ಆಟಗಾರ.
ಫಿಲ್ ಸಾಲ್ಟ್ ಬಾರಿಸಿದ ಚೆಂಡು ಬೌಲರ್ ಕ್ರಿಸ್ ಗ್ರೀನ್ಗೆ ಕೈಗೆ ತಗುಲಿ ವಿಕೆಟ್ಗೆ ಬಡಿಯವ ವೇಳೆಗೆ ವೀಥರಾಲ್ಡ್ ಕ್ರೀಸ್ ಬಿಟ್ಟಿದ್ದರು. ಚೆಂಡು ವಿಕೆಟ್ಗೆ ಬಡಿದು ಕವರ್ ಕ್ಷೇತ್ರದತ್ತ ಹೋದ ಕಾರಣ ರನ್ ಕದಿಯಲು ಯತ್ನಿಸಿದ ಜ್ಯಾಕ್, ಸ್ಟ್ರೈಕರ್ ಬದಿಯಲ್ಲೂ ರನೌಟ್ ಆದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿ👇👇👇
What just happened?! Jake Weatherald somehow got run out at both ends, on the same ball! 🤯
A @KFCAustralia Bucket Moment | #BBL10 pic.twitter.com/eLRurkBQtp
— KFC Big Bash League (@BBL) January 24, 2021
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
