fbpx
ಸಮಾಚಾರ

ವಿರಾಟ್ ಕೊಹ್ಲಿಗೆ ಲೀಗಲ್ ನೋಟೀಸ್ ನೀಡಿದ ಹೈಕೋರ್ಟ್; ಸಂಕಷ್ಟದಲ್ಲಿ ಟೀಂ ಇಂಡಿಯಾ ನಾಯಕ!

ತಂದೆಯಾಗಿ ಬಡ್ತಿ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಗೆ ತಯಾರಿ ಆರಂಭಿಸಿರುವ ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ಲೀಗಲ್ ನೊಟೀಸ್ ನೀಡಿದೆ. ಕೊಹ್ಲಿಗೆ ನೋಟಿಸ್ ನೀಡಲು ಕಾರಣವೇನು ಅಂತೀರಾ? ಮುಂದೆ ಓದಿ

ಆನ್‌ಲೈನ್ ರಮ್ಮಿ ಸರ್ಕಲ್ ಗೇಮ್‌ಗಳಿಂದ ಯುವಕರ ವ್ಯಸನಿಗಳಾಗುತ್ತಿದ್ದಾರೆ. ಇದಕ್ಕೆ ರಾಯಭಾರಿಯಾದ ವಿರಾಟ್ ಕೊಹ್ಲಿ ಕೂಡ ಕಾರಣರಾಗಿದ್ದಾರೆ ಎಂದು ಪಿಟೀಶನ್ ಸಲ್ಲಿಸಲಾಗಿತ್ತು. ಇಷ್ಟೇ ಅಲ್ಲ ರಮ್ಮಿ ಸರ್ಕಲ್ ಗೇಮ್ ನಿಷೇಧಿಸುವಂತೆ ಕೋರಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ರಮ್ಮಿ ಸರ್ಕಲ್ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿಗೆ ನೋಟಿಸ್ ಜಾರಿಮಾಡಿದೆ.

ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಮತ್ತು ಮಲಯಾಳಂ ನಟ ಅಜು ವರ್ಗೀಸ್ ಅವರಿಗೆ ಕೂಡ ಕೇರಳ ಹೈಕೋರ್ಟ್ ನೋಟೀಸ್ ನೀಡಿದೆ.

 

 

“ಆನ್‌ಲೈನ್ ರಮ್ಮಿ ಆಟಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದನ್ನು ಕಾನೂನುಬದ್ಧವಾಗಿ ನಿಷೇಧಿಸಬೇಕು. ಇತರ ರಾಜ್ಯಗಳು ಇದಾಗಲೇ ನಿಷೇಧ ಮಾಡಿದ್ದು ಕೇರಳದಲ್ಲಿಯೂ ಸಹ ಈ ಕ್ರಮಕ್ಕೆ ಮುಂದಾಗಬೇಕು ಕೇರಳದಲ್ಲಿ 1960 ರ ಕಾನೂನು ಇದೆ, ಆದರೆ ಬೇರಾವ ಕ್ರ್ಮ ತೆಗೆದುಕೊಂಡಿಲ್ಲ ” ಎಂದು ಆರೋಪಿಸಿ ತ್ರಿಶೂರ್ ಮೂಲದ ಪೌಲಿ ವಡಕ್ಕನ್ ಎನ್ನುವವರು ಅರ್ಜಿಯನ್ನು ಸಲ್ಲಿಸಿದ್ದರು. ಇದು ಆನ್‌ಲೈನ್ ರಮ್ಮಿ ವಿಷಯವನ್ನು ಮಾತ್ರ ಒಳಗೊಂಡಿಲ್ಲ, ಬ್ರಾಂಡ್ ರಾಯಭಾರಿಗಳಾಗಿರುವ ಸ್ಟಾರ್ ಗಳು ಪ್ರೇಕ್ಷಕರನ್ನು ಆಕರ್ಷಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಇಂತಹಾ ಆಟಗಳು ಜೂಜಾಟದಂತೆಯೇ ಇದೆ ಎಂದು ಅರ್ಜಿಯಲ್ಲಿ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top