fbpx
ಸಮಾಚಾರ

ಸ್ಯಾಂಡಲ್ ವುಡ್ ಡ್ರ’ಗ್ ಡೀಲ್ ಪ್ರಕರಣ: ಇಂದ್ರಜಿತ್ ಲಂಕೇಶ್‍ಗೆ ಮತ್ತೊಮ್ಮೆ ಸಿಸಿಬಿ ಬುಲಾವ್

ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದ ಇಂದ್ರಜಿತ್ ಲಂಕೇಶ್‌ ಗೆ ಮತ್ತೊಮ್ಮೆ ಸಿಸಿಬಿ ಬುಲಾವ್ ನೀಡಿದೆ. ಸಿಸಿಬಿ ಡಿಸಿಪಿ ಬಸವರಾಜ ಅಂಗಡಿ ಮುಂದೆ ಹಾಜರಾಗಲು ಸೂಚಿಸಲಾಗಿದೆ.

ಈ ಹಿಂದೆ ಅಂದರೆ ಕಳೆದ ವರ್ಷ ಆಗಸ್ಟ್​​ 31ರಂದು ಮೊದಲ ಬಾರಿಗೆ ಸಿಸಿಬಿ ಮುಂದೆ ಹಾಜರಾಗಿದ್ದ ಇಂದ್ರಜಿತ್ ಕೇವಲ ಮೌಖಿಕವಾಗಿ ಡ್ರಗ್ಸ್​ ಜಾಲದಲ್ಲಿ ತಡಗಿದ್ದಾರೆನ್ನಲಾದ ಸುಮಾರು 15 ನಟ ನಟಿಯರ ಹೆಸರನ್ನ ತಿಳಿಸಿದ್ರು ಎನ್ನಲಾಗಿತ್ತು. ನಂತರ ಸೆಪ್ಟೆಂಬರ್ 2 ರಂದು ಸಿಸಿಬಿ ಮತ್ತೆ ನೋಟಿಸ್ ನೀಡಿ ಇಂದ್ರಜಿತ್​​ರನ್ನ ಕರೆದು ಮಾಹಿತಿ ಪಡೆದಿತ್ತು

ಇದಾದ ಬಳಿಕ ಅಂದ್ರೆ ಕಳೆದ ಡಿ. 18ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಇಂದ್ರಜಿತ್ ಲಂಕೇಶ್, ಬರೀ ನಟಿಯರು ಮಾತ್ರ ಡ್ರಗ್ಸ್​ ತಗೋಳೋದಾ? ನಟರು ತೆಗೆದುಕೊಂಡಿಲ್ವಾ? ಡ್ರಗ್ ಹಿನ್ನೆಲೆ ಇರುವವರನ್ನ ಏಕೆ ಅರೆಸ್ಟ್ ಮಾಡಿಲ್ಲ? ಎಂದು ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಡ್ರಗ್ಸ್ ಪ್ರಕರಣದ ತನಿಖೆ ಬಗ್ಗೆ ಅಸಮಧಾನ ಇದೆ. ಇನ್ನೂ ಸರಿಯಾದ ತನಿಖೆ‌ ನಡೆದಿಲ್ಲ ಎಂದಿದ್ದರು. ಇದೀಗ ಮತ್ತೊಮ್ಮೆ ವಿಚಾರಣೆಗೆ ಕರೆದಿರುವ ಸಿಸಿಬಿ, ನಾಳೆ ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ಮುಂದೆ ಹಾಜರಾಗುವಂತೆ ತಿಳಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನೀಡುವಂತೆ ಕೋರಿ, ಸಿಸಿಬಿ ಅಧಿಕಾರಿಗಳು ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದು, ಸಿಸಿಬಿ ಕಚೇರಿಗೆ ಗುರುವಾರ (ಜ.28) ಬೆಳಿಗ್ಗೆ ಬರುವಂತೆ ತಿಳಿಸಲಾಗಿದೆ. ತನಿಖಾಧಿಕಾರಿ ಪುನೀತ್ ಕುಮಾರ್‌ ವಿಚಾರಣೆ ನಡೆಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top