fbpx
ಸಮಾಚಾರ

ಆರ್‌ಸಿಬಿ ಸೇರಿಕೊಂಡ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್: ಹರಾಜಿಗೂ ಮುನ್ನ RCB ಅಚ್ಚರಿಯ ನಡೆ!

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್14ನೇ ಸೀಸನ್​ಗೆ ಸಿದ್ದತೆ ಶುರುವಾಗಿದೆ. ಅದರ ಮೊದಲ ಹಂತವಾದ ಆಟಗಾರರ ಬಿಡುಗಡೆ ಪ್ರಕ್ರಿಯೆ ಕೂಡ ಮುಗಿದಿದೆ. ಎಲ್ಲಾ ಫ್ರಾಂಚೈಸಿಗಳು 5 ಕ್ಕೂ ಹೆಚ್ಚಿನ ಆಟಗಾರರನ್ನು ಕೈ ಬಿಟ್ಟಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಆಟಗಾರರನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಹೊಸ ತಂಡ ಕಟ್ಟುವ ಯೋಜನೆಯಲ್ಲಿದೆ.

 

 

ಈ ಮದ್ಯೆ ಆರ್​ಸಿಬಿ ಇಬ್ಬರು ಆಟಗಾರರನ್ನು ಟ್ರೇಡ್ ಮಾಡಿದೆ. ಆಸ್ಟ್ರೇಲಿಯಾದ ಎಡಗೈ ಮಧ್ಯಮ ವೇಗಿಯಾದ ಡೇನಿಯಲ್ ಸ್ಯಾಮ್ಸ್ ಅವರನ್ನು RCB ಟ್ರೇಡ್ ಮಾಡಿದೆ. ಜೊತೆಗೆ ಭಾರತೀಯ ಆಲ್ ರೌಂಡರ್ ಹರ್ಷಲ್ ಪಟೇಲ್ ಅವರನ್ನು ಕೂಡ ಟ್ರೆಂಡ್ ಮೂಲಕ ತಂಡದಲ್ಲಿ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ರನ್ನರ್‌ ಅಪ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಡೇನಿಯಲ್‌ ಸ್ಯಾಮ್ಸ್ ಹಾಗೂ ಹರ್ಷಲ್‌ ಪಟೇಲ್‌ ಆಡಿದ್ದರು. ಇದೀಗ 2021ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಜೆರ್ಸಿಯೊಂದಿಗೆ ಈ ಇಬ್ಬರೂ ಕಣಕ್ಕೆ ಇಳಿಯುವ ತುಡಿತದಲ್ಲಿದ್ದಾರೆ.

ಉಳಿದಂತೆ ನಾಯಕ ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಯುಜ್ವೇಂದ್ರ ಚಹಲ್ ಸೇರಿದಂತೆ ಒಟ್ಟು 12 ಆಟಗಾರರನ್ನು‌ ಆರ್‌ಸಿಬಿ ಉಳಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ದೇವದತ್ ಪಡಿಕ್ಕಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಅವರನ್ನೂ ಬೆಂಗಳೂರು ಫ್ರಾಂಚೈಸಿ ತನ್ನಲ್ಲಿಯೇ ಇಟ್ಟುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top