fbpx
ಸಮಾಚಾರ

ಬಿಬಿಎಂಪಿ ಹಿಂದಿ ಮಾರ್ಷಲ್‌ಗಳಿಂದ ಕನ್ನಡಿಗರ ಮೇಲೆ ಮಿತಿಮೀರಿದ ದಬ್ಬಾಳಿಕೆ: ಸಾರ್ವಜನಿಕರ ಆಕ್ರೋಶ

ಬಿಬಿಎಂಪಿ ನೇಮಿಸಿರುವ ಮಾರ್ಷಲ್‌ಗಳಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಬೆಂಗಳೂರಿನ ಅಮಾಯಕ ಜನರು ಆರೋಪಿಸುತ್ತಿದ್ದಾರೆ. ಮಾರ್ಷಲ್ ಗಳಲ್ಲಿ ಬಹುತೇಕರು ಹಿಂದಿಗರೆ ಆಗಿದ್ದು ಹಿಂದಿ ಗೊತ್ತಿಲ್ಲದ ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಮಾತುಗಳು ಗಳು ಬೆಂಗಳೂರಿನಾದ್ಯಂತ ಕೇಳಿಬರುತ್ತಿವೆ. ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಮಾಸ್ಕ್ ಕಡ್ಡಾಯ ನಿಯಮವನ್ನು ಪರಿಪಾಲಿಸಲು ಮಾರ್ಷಲ್ ಗಳನ್ನು ಬಿಬಿಎಂಪಿ ನೇಮಕ ಮಾಡಿತ್ತು. ಆದರೆ ಆಘಾತಕಾರಿ ವಿಷಯ ಏನಂದರೆ ಇದೆ ಮಾರ್ಷಲ್ ಗಳಿಂದ ಜನಸಾಮಾನ್ಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

 

 

ಈ ಮಾರ್ಷಲ್ ಗಳಿಗೂ ದಿನನಿತ್ಯ ಟಾರ್ಗೆಟ್ ನೀಡಲಾಗಿದೆಯಂತೆ… ಮಾಸ್ಕ್ ಧರಿಸದಿದ್ದರೆ ಸ್ಥಳದಲ್ಲೇ ದಂಡಹಾಕುವ ಬಿಬಿಎಂಪಿ ಮಾರ್ಷಲ್ ಗಳಿಗೆ ನಿತ್ಯ ಕನಿಷ್ಟ 20 ಪ್ರಕರಣಗಳನ್ನು ದಾಖಲಿಸಲೇಬೇಕು ಎಂಬ ನಿಯಮ ವಿಧಿಸಲಾಗಿದೆಯಂತೆ. ಆ ಕಾರಣಕ್ಕಾಗಿ ತಮ್ಮ ಟಾರ್ಗೆಟ್ ಸಾಧಿಸುವುದಕ್ಕಾಗಿ ಮಾರ್ಷಲ್ ಗಳು ಜನರ ಜೀವ ಹಿಂಡುತ್ತಿದ್ದಾರೆ.

ಜನರೊಂದಿಗೆ ಮಾರ್ಷಲ್ ಗಳು ಸಂಯಮದಿಂದ ವರ್ತಿಸಬೇಕು, ಮೂಗು ಮತ್ತು ಬಾಯಿ ಸಂಪೂರ್ಣವಾಗಿ ಮುಚ್ಚುವಂತಹ ಯಾವುದೇ ರೀತಿಯ ಮಾಸ್ಕ್/ಕರವಸ್ತ್ರ/ಬಟ್ಟೆ ಧರಿಸಿದ್ದರೆ ಅವರಿಗೆ ದಂಡ ವಿಧಿಸಬಾರದು. ಆದರೆ ಮಾರ್ಷಲ್ ಗಳು ಮಾತ್ರ /ಕರವಸ್ತ್ರ/ಬಟ್ಟೆ ಧರಿಸಿರುವ ಜನರಿಗೂ ದಂಡ ಕಟ್ಟುವಂತೆ ಹಿಂಸೆ ನೀಡುತ್ತಿದ್ದಾರೆ. ಮಾಸ್ಕ್ ಧರಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದನ್ನು ಬಿಟ್ಟು ಹಣದ ಆಸೆಗೆ ಒಳಗಾಗಿ ಬೇಕಾಬಿಟ್ಟಿ ದಂಡ ಹಾಕುತ್ತಿದ್ದಾರೆ.

ಮಾಸ್ಕ್ ಧರಿಸಿಲ್ಲ ಎಂದು ಗಾರೆ ಕೆಲಸದಾಕೆಗೆ 250ರೂ. ದಂಡ ವಿಧಿಸಿರುವ ಘಟನೆ ಇತ್ತೀಚಿಗಷ್ಟೇ ನಡೆದಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. “ನೀವು ಗಾರೆ ಕೆಲಸ ಮಾಡಿ ನಮ್ಮ ಕಷ್ಟ ಏನು ಎಂದು ನಿಮಗೆ ಗೊತ್ತಾಗುತ್ತೆ, ನಾವು ಬಡವರು, ನಮ್ಮ ಬಳಿ ಈ ರೀತಿ ನಡೆದುಕೊಂಡಿದ್ದು ತಪ್ಪು” ಎಂದು ಕಣ್ಣೀರಿಡುತ್ತಾ ಹೇಳುವ ವಿಡಿಯೋವನ್ನು ಕಂಡು ನೆಟ್ಟಿಗರು ಮರುಗಿದ್ದರು. ಸಂಸದ ಜಿಸಿ ಚಂದ್ರಶೇಖರ್ ಅವರು ಕೂಡ ಈ ವಿಡಿಯೋವನ್ನು ಹಂಚಿಕೊಂಡು ಮಹಿಳೆಯ ಬೆಂಬಲವಾಗಿ ನಿಂತಿದ್ದರು.

 

 

ಹಾಗೆ ನೋಡಿದರೆ ಬಹುತೇಕ ಮಾರ್ಷಲ್ ಗಳಿಗೆ ಕನ್ನಡವೇ ಬರುವುದಿಲ್ಲ, ಅವರೊಂದಿಗೆ ಸಂವಹಿಸಲು ಪ್ರಯತ್ನಿಸಿದರೆ ಹಿಂದಿಯಲ್ಲಿ ಮಾತನಾಡಿ ಎಂದು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಹಿಂದಿವಾಲಾ ಮಾರ್ಷಲ್ ಗಳು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದ್ದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರಿಗೆ ಬೇಸರ ತರಿಸಿದೆ. ಜನರಿಗೆ ಕಿರುಕುಳ ನೀಡಲು ಬಿಬಿಎಂಪಿಯೇ ಮಾರ್ಷಲ್ ಗಳನ್ನು ಛೂ ಬಿಟ್ಟಿದಿಯೇ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡಿದೆ.

 

BBMP Commissioner ಕನ್ನಡ ಬಾರದ ಹಿಂದಿ ಮಾರ್ಷಲ್ಸ್ ನ ನೇಮಕಾತಿ ಮಾಡುತ್ತಿದೆ, ಕನ್ನಡ ಗೊತ್ತಿಲ್ಲದ ಮಾರ್ಷಲ್ಸ್ ಬೆಂಗಳೂರಿನ ರೋಡಿನಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿಕೊಂಡು ವಸೂಲಾತಿಗೆ ಮುಂದಾಗುತ್ತಿದ್ದಾರೆ !

Posted by ಸಾಮಾನ್ಯ ಕನ್ನಡಿಗ Samanya Kannadiga on Wednesday, 27 January 2021

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top