fbpx
ಸಮಾಚಾರ

ಬಹುಕಾಲದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಲ್‌ರೌಂಡರ್ ವಿಜಯ್ ಶಂಕರ್

ಭಾರತೀಯ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಆಗಿ ಮಿಂಚಿರುವ ತಮಿಳುನಾಡು ಮೂಲದ ವಿಜಯ್ ಶಂಕರ್ ಅವರು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 30 ವರ್ಷ ವಯಸ್ಸಿನ ವಿಜಯ್ ಶಂಕರ್ ಅವರು ದಾಂಪತ್ಯದ ಇನ್ನಿಂಗ್ಸ್ ಶುರುವಾಗಿದ್ದು, ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು ಇಂದು ವಿವಾಹವಾಗಿದ್ದಾರೆ.

 

 

ಚೆನ್ನೈನಲ್ಲಿ ಸಂಪ್ರದಾಯವಾಗಿ ನಡೆದ ವಿವಾಹ ಮಹೋತ್ಸವದಲ್ಲಿ ವಿಜಯ್ ಶಂಕರ್ ವೈಶಾಲಿ ವಿಶ್ವೇಶರನ್ ರನ್ನು ಮದುವೆಯಾದರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ರನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಬಂಧುಮಿತ್ರರ ಸಮ್ಮುಖದಲ್ಲಿ ವಿವಾಹವಾದರು. ಕೋವಿಡ್-19 ಮಾರ್ಗಸೂಚಿ ಅನ್ವಯ ಕೆಲವೇ ಕುಟುಂಬಸ್ಥರು ಮತ್ತು ಬಂಧುಮಿತ್ರರ ಸಮುಖದಲ್ಲಿ ವಿವಾಹ ನೆರವೇರಿಸಲಾಯಿತು.

ಸನ್ ರೈಸರ್ಸ್ ಹೈದರಾಬಾದ್ ತಂಡ ತಮ್ಮ ತಂಡದ ಆಟಗಾರ ವಿಜಯ್ ಶಂಕರ್ ಮದುವೆ ಚಿತ್ರ ಹಂಚಿಕೊಂಡಿದೆ. 2018ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವಿಜಯ್ ಶಂಕರ್ 12 ಏಕದಿನ ಹಾಗೂ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಬಳಿಕ ತಂಡದಿಂದ ಸ್ಥಾನವನ್ನು ಕಳೆದುಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top