fbpx
ಸಮಾಚಾರ

“ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ” ರೊಚ್ಚಿಗೆದ್ದ ದರ್ಶನ್

ರಾಬರ್ಟ್​ ಚಿತ್ರ ರಿಲೀಸ್​ಗೆ ಟಾಲಿವುಡ್​ನಲ್ಲಿ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಫಿಲಂ ಚೇಂಬರ್​ಗೆ ನಿರ್ಮಾಪಕರು ಹಾಗೂ ನಟ ದರ್ಶನ್ ದೂರು ನೀಡಿದ್ದಾರೆ. ಈ ವೇಳೆ ಫಿಲಂ ಚೇಂಬರ್​ನಲ್ಲಿ ಮಾತನಾಡಿದ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ. ನಾನು ಇದನ್ನು ಓಪನ್​ ಆಗಿ ಹೇಳುತ್ತೇನೆಂದು ಬೆಂಗಳೂರಿನ ಫಿಲ್ಮ್ ಚೇಂಬರ್​ನಲ್ಲಿ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

ಫಿಲ್ಮ್​​ ಚೇಂಬರ್​​ನಲ್ಲಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದರ್ಶನ್​ ಅವರು, ನಿರ್ಮಾಪಕರಿಗೆ ಸಮಸ್ಯೆ ಎಂದು ಬಂದಾಗ ನಾನು ಯಾವತ್ತೂ ಮುಂದೆ ಬರುತ್ತೇನೆ. ಅವರಿಗೆ ಒಳ್ಳೆದಾಗಲಿ ಎಂಬುದು ನನ್ನ ಉದ್ದೇಶ. ಕನ್ನಡದಲ್ಲಿ ಸಿನಿಮಾಗಳಿಗೆ ಸಮಸ್ಯೆಯಾದರೆ ಅದರ ಬಗ್ಗೆ ಮಾತನಾಡುವುದು ನನ್ನ ಒಬ್ಬನ ಜವಾಬ್ದಾರಿ ಅಂತ ಅಲ್ಲ. ಎಲ್ಲರೂ ಕೂಡ ಇಂತಹ ಸಮಸ್ಯೆಗಳಿಗೆ ಜವಾಬ್ದಾರಿ ಆಗಬೇಕು ಎಂದರು.

ತೆಲುಗು ವಿತರಕರು ಅವರ ಸಮಸ್ಯೆ ಹೇಳಿದ್ದಾರೆ. ನಾವು ಅಲ್ಲಿಗೆ ಹೋದರೆ ಸಮಸ್ಯೆ ಆಗುತ್ತೆ ಎಂದಿದ್ದಾರೆ. ಆದರೆ ಅವರು ಇಲ್ಲಿಗೆ ಬಂದರೆ ನಮಗೆ ಸಮಸ್ಯೆ ಆಗೋದಿಲ್ವಾ.. ನಮ್ಮಲ್ಲಿ ಭಾಷಾ ಅಭಿಮಾನ ಕಡಿಮೆ ಇದೆ. ಯಾರೇ ಬಂದರೂ ಅವರ ಭಾಷೆಯಲ್ಲೇ ನಾವು ಮಾತನಾಡುತ್ತೇವೆ. ನಾವು ಸುಮ್ಮನೆ ಇದ್ದರೇ ಏನೂ ಆಗಲ್ಲ. ಸದ್ಯ ಫಿಲ್ಮ್​​ ಚೇಂಬರ್​ ಅವರಿಗೆ ಸಮಸ್ಯೆ ಹೇಳಿದ್ದೇವೆ. ಅವರು ಬಗೆಹರಿಸುವ ಅಶ್ವಾಸನೆ ನೀಡಿದ್ದಾರೆ ಎಂದರು.

ಏನಿದು ವಿವಾದ?
ಕೊರೊನಾ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿ ಹೊಸ ರೂಲ್ಸ್ ಜಾರಿ ಮಾಡಿಕೊಂಡಿದೆ. ಅದರ ಅನ್ವಯ ತೆಲುಗು ಸಿನಿಮಾ ಬಿಡುಗಡೆಯ ದಿನ ಬೇರೆ ಯಾವುದೇ ಪರಿಭಾಷೆಯ ಚಿತ್ರಗಳು ತಮ್ಮ ನಾಡಿನಲ್ಲಿ ಬಿಡುಗಡೆ ಮಾಡುವಂತಿಲ್ಲ ಅನ್ನೋ ನಿಯಮ ತೆಲುಗು ಸಿನಿಮಾ ಇಂಡಸ್ಟ್ರಿ ರೂಢಿಸಿಕೊಂಡಿದೆ. ಹೀಗಾಗಿ ಆಂಧ್ರ ತೆಲಂಗಾಣದಲ್ಲಿ ಮಾರ್ಚ್ 11 ಕ್ಕೆ ತೆಲುಗು ಸಿನಿಮಾ ರಿಲೀಸ್ ಇರುವ ಕಾರಣ ಕನ್ನಡದ ‘ರಾಬರ್ಟ್’ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಇದನ್ನ ಪ್ರಶ್ನಿಸಿ ದರ್ಶನ್ ಹಾಗೂ ರಾಬರ್ಟ್ ಟೀಮ್ ಇಂದು ಕನ್ನಡ ಫಿಲ್ಮ್ ಚೇಂಬರ್ ಗೆ ದೂರು ನೀಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top