fbpx
ಸಮಾಚಾರ

“ನನ್ನ ಕಥೆ ಬಿಡಿ, ಯುವನಟರಿಗೆ ತೊಂದರೆಯಾಗುತ್ತೆ” ಟಾಲಿವುಡ್ ವಿರುದ್ಧ ಗುಡುಗಿದ ದರ್ಶನ್

ನಂದು 50 ಸಿನಿಮಾ ಆಯ್ತು. ನನ್ನ ಕಥೆ ಬಿಡಿ. ಮುಂದೆ ಯುವನಟರ ಸಿನಿಮಾಗಳಿಗೆ ಸಮಸ್ಯೆಯಾಗುತ್ತೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ರಾಬರ್ಟ್ ಸಿನಿಮಾಗೆ ತೆಲುಗು ಇಂಡಸ್ಟ್ರಿಯಲ್ಲಿ ಅಡ್ಡಿಯಾಗುತ್ತಿರುವ ಸಂಬಂಧ ಫಿಲಂ ಚೇಂಬರ್‍ಗೆ ದೂರು ನೀಡಲು ಹೋಗುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ತೆಲುಗು ಸಿನಿಮಾಗಳು ಕರ್ನಾಟದಲ್ಲಿ ಯಾವುದೇ ತೊಂದರೆ ಇಲ್ಲದೇ ರಿಲೀಸ್ ಆಗುತ್ತೆ. ಆದರೆ ಆಂಧ್ರದಲ್ಲಿ ಕನ್ನಡ ಸಿನಿಮಾಗಳಿಗೆ ತೊಂದರೆಯಾಗುತ್ತೆ ಎಂದರು.

ಫಿಲ್ಮ್​ ಚೇಂಜರ್​​ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್, ನಾವು ಬರುತ್ತೇವೆ ಅಂತಾ ಅವರಿಗೆ ಹೆದರಿಕೆ ಆಗುತ್ತಿದೆ. ಅದನ್ನೇ ಅವರು ಹೇಳುತ್ತಿದ್ದಾರೆ. ನೀವು ಎಲ್ಲರೂ ಬಂದು ಮಾರ್ಕೆಟ್​ ದೊಡ್ಡದು ಮಾಡಿಕೊಂಡರೇ ನಮ್ಮ ಹೀರೋಗಳು ಎಲ್ಲಿ ಹೋಗಬೇಕು ಅಂತರೇ. ಆದರೆ ಅವರು ಬಂದು ಇಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ಅಲ್ವಾ ನಾವು ಎಲ್ಲಿ ಹೋಗಬೇಕು.

ಈಗ ನಾನು ನಾಯಕನಟನಾಗಿ 50 ಸಿನಿಮಾಗಳು ಮುಗಿತು. ಆದ್ದರಿಂದ ನಮ್ಮನ್ನು ಬಿಟ್ಟು ಬಿಟ್ಟರೂ ಈಗ ಇಂಡಸ್ಟ್ರಿಗೆ ಬರುತ್ತಿರುವ ಹೊಸಬರ ಸ್ಥಿತಿ ಏನಾಗಬೇಕು. ಇದಕ್ಕೆ ಮಾಧ್ಯಮಗಳು ಸಹಕಾರ ನೀಡಬೇಕು. ಫಿಲ್ಮ್ ಚೇಂಬರ್​​​ನಲ್ಲಿ ನಮ್ಮ ಕನ್ನಡದ ಸಿನಿಮಾಗಳಿಗೆ ಏಕೆ ಸಮಸ್ಯೆ ಆಗ್ತಿದೆ? ಎಂಬ ಬಗ್ಗೆ ಚರ್ಚೆ ನಡೆಸಲು ಇಂದು ತೆರಳುತ್ತಿದ್ದು, ಚರ್ಚೆ ಮಾಡುತ್ತೇವೆ ಆ ಬಳಿಕ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು

ಏನಿದು ವಿವಾದ?
ಕೊರೊನಾ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿ ಹೊಸ ರೂಲ್ಸ್ ಜಾರಿ ಮಾಡಿಕೊಂಡಿದೆ. ಅದರ ಅನ್ವಯ ತೆಲುಗು ಸಿನಿಮಾ ಬಿಡುಗಡೆಯ ದಿನ ಬೇರೆ ಯಾವುದೇ ಪರಿಭಾಷೆಯ ಚಿತ್ರಗಳು ತಮ್ಮ ನಾಡಿನಲ್ಲಿ ಬಿಡುಗಡೆ ಮಾಡುವಂತಿಲ್ಲ ಅನ್ನೋ ನಿಯಮ ತೆಲುಗು ಸಿನಿಮಾ ಇಂಡಸ್ಟ್ರಿ ರೂಢಿಸಿಕೊಂಡಿದೆ. ಹೀಗಾಗಿ ಆಂಧ್ರ ತೆಲಂಗಾಣದಲ್ಲಿ ಮಾರ್ಚ್ 11 ಕ್ಕೆ ತೆಲುಗು ಸಿನಿಮಾ ರಿಲೀಸ್ ಇರುವ ಕಾರಣ ಕನ್ನಡದ ‘ರಾಬರ್ಟ್’ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಇದನ್ನ ಪ್ರಶ್ನಿಸಿ ದರ್ಶನ್ ಹಾಗೂ ರಾಬರ್ಟ್ ಟೀಮ್ ಇಂದು ಕನ್ನಡ ಫಿಲ್ಮ್ ಚೇಂಬರ್ ಗೆ ದೂರು ನೀಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top