fbpx
ಸಮಾಚಾರ

ಭಾರತೀಯ ಮೂಲದ ಕ್ಯಾಬ್ ಡ್ರೈವರ್ ಮಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆ!

ಭಾರತೀಯ ಮೂಲದ 19ರ ಹರೆಯದ ತನ್ವೀರ್ ಸಂಘಾ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಆಯ್ಕೆ ಮಾಡಿದೆ. ಫೆ.27ರಿಂದ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿಯಲ್ಲಿ ತನ್ವೀರ್ ಆಡಲಿದ್ದಾರೆ.

ಜಲಂಧರ್ ಮೂಲದ ಜೋಗಾ ಎಂಬುವರು 1997ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಗೆ ತೆರಳಿದ್ದರು. ಅಲ್ಲಿ ಟ್ಯಾಕಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಆಸ್ಟ್ರೇಲಿಯಾದ ಪೌರತ್ವವನ್ನು ಪಡೆದುಕೊಂಡಿದ್ದರು. ನಂತರ 2001ರಲ್ಲಿ ತನ್ವೀರ್ ಸಂಘಾ ಜನಿಸಿದ್ದರು. ಮಗ ಕ್ರೀಡೆಯಲ್ಲಿ ಹೆಚ್ಚು ಹೊಂದಿರುವುದನ್ನು ಕಂಡ ತಂದೆ ಆತನ ಬೆನ್ನೆಲುಬಾಗಿ ನಿಂತರು.

ತನ್ವೀರ್ ಸಂಘಾ ಅಂಡರ್ 19 ಟೂರ್ನಿಯಲ್ಲಿ ಆಡಿದ್ದರು. ಲೆಗ್ ಸ್ಪಿನ್ನರ್ ಆಗಿರುವ ಸಂಘಾ ಬಿಗ್ ಬ್ಯಾಷ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಸಿಡ್ನಿಯ ಥಂಡರ್ ತಂಡದ ಪರವಾಗಿ ಆಡಿದ್ದ ಅವರು, 14 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದರು.

ಇದೀಗ ಆಸ್ಟ್ರೇಲಿಯಾ ಆಯ್ಕೆ ಸಮಿತಿ ತನ್ವೀರ್ ನ ಅಮೋಘ ಪ್ರದರ್ಶನವನ್ನು ಕಂಡು ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಆಯ್ಕೆ ಮಾಡಿದೆ. ಫೆ.27ರಿಂದ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿಯಲ್ಲಿ ತನ್ವೀರ್ ಆಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top