fbpx
ಸಮಾಚಾರ

ಬರೋಬ್ಬರಿ 12 ವರ್ಷಗಳ ಬಳಿಕ ಫಿಲ್ಮಂ ಚೇಂಬರ್​ಗೆ ಭೇಟಿಕೊಟ್ಟ ದರ್ಶನ್: ಈ ಹಿಂದೆ ಬಂದಿದ್ದು ಯಾವಾಗ ಗೊತ್ತಾ?

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲಗು ಅವತರಣಿಕೆಯನ್ನು ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲು ಎದುರಾಗಿದ್ದ ತೊಡಕಿನ ಬಗ್ಗೆ ದೂರು ನೀಡಲು ರಾಬರ್ಟ್ ಚಿತ್ರ ನಿರ್ಮಾಪಕರ ಜೊತೆ ನಟ ದರ್ಶನ ಅವರು ನೆನ್ನೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಿದ್ದಾರೆ.

ವಿಶೇಷ ಏನಂದ್ರೆ ದರ್ಶನ್ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದು ಬರೋಬ್ಬರಿ ೧೨ ವರ್ಷಗಳ ನಂತರ. ಹೌದು ಈ ಹಿಂದೆ ನಟಿ ಜಯಮಾಲ ಅಧ್ಯಕ್ಷರಾಗಿದ್ದ ವೇಳೆ 2009ರಲ್ಲಿ ದರ್ಶನ್ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದರು. ಅದಾದ ನಂತರ ಇಲ್ಲಿಯವರೆಗೂ ದರ್ಶನ್ ಫಿಲ್ಮ್ ಚೇಂಬರ್​​ಗೆ ಭೇಟಿ ನೀಡಿರಲಿಲ್ಲ.

2009ರಲ್ಲಿ ಕನ್ನಡ ಚಿತ್ರರಂಗ 75 ವರ್ಷ ಪೂರೈಸಿದ ಅಂಗವಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇಡೀ ಚಿತ್ರರಂಗ ಒಟ್ಟಾಗಿ ಭಾಗವಹಿಸಿ ಈ ಅದ್ದೂರಿಯಾಗಿ ಆಚರಿಸಿತ್ತು. ಈ ವೇಳೆ ಅಂಬರೀಶ್ ಅವರ ಜೊತೆ ದರ್ಶನ್ ಫಿಲ್ಮ್ ಚೇಂಬರ್​ಗೆ ಭೇಟಿ ಕೊಟ್ಟಿದ್ದರು. ಆಗ ಬಿಟ್ಟರೆ ದರ್ಶನ್ ಮತ್ತೆ ಚೇಂಬರ್ ಮೆಟ್ಟಿಲು ಹತ್ತಿದ್ದು ನೆನ್ನೆಯೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top