fbpx
ಸಮಾಚಾರ

“ನಾನು ತುಂಬಾ ಅಮಾಯಕಿ, ನನಗೆ ಉಸಿರಾಡಲು ಅವಕಾಶ ಕೊಡಿ” ರಾಗಿಣಿ ದ್ವಿವೇದಿ

ಜೈಲಿನಿಂದ ಹೊರ ಬಂದಿರುವ ನಟಿ ರಾಗಿಣಿ ದ್ವಿವೇದಿ ಇಂದು ಸಿಟಿ ಸಿವಿಲ್ ಕೋರ್ಟ್ ನ ಎನ್‍ಡಿಪಿಎಸ್ ಕೋರ್ಟ್ ಗೆ ಹಾಜರಾದರು. ನ್ಯಾಯಾಲಯಕ್ಕೆ ಹಾಜರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೊಂದಿದ್ದೇನೆ. ಶೀಘ್ರದಲ್ಲಿಯೇ ಒಂದಷ್ಟು ವಿಚಾರ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

“ಕೋರ್ಟ್ ಪ್ರಕ್ರಿಯೆ ಹಿನ್ನೆಲೆ ಬಂದಿದ್ದು, ತನಿಖೆಗೆ ಸಹಕರಿಸುತ್ತಿದ್ದೇವೆ. ನಮ್ಮ ಸ್ಟೋರಿ ಏನಿದೆ? ಏನು ನಡೆಯುತ್ತಿದೆ? ಅದನ್ನ ಯಾರು ಕೇಳಿ ಬೇಕೆಂತಿನಿಲ್ಲ. ಈಗಾಗಲೇ ಮಾಧ್ಯಮಗಳು ಕೆಲ ಸುದ್ದಿಗಳನ್ನ ಬಿತ್ತರಿಸಿವೆ. ಹೇಳಬೇಕಾದವರು ಎಲ್ಲ ಹೇಳಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಲು ಇಷ್ಟಪಡಲು ಇಷ್ಟವಿಲ್ಲ. ಸ್ವಲ್ಪ ಉಸಿರಾಡಲು ಸಮಯ ನೀಡಿದ್ರೆ ಎಲ್ಲದರ ಕುರಿತು ಮಾತನಾಡುತ್ತೇನೆ. ಕಷ್ಟದಿನಗಳಿಂದ ಸದ್ಯ ಹೊರ ಬಂದಿದ್ದೇವೆ” ಎಂದು ಹೇಳಿದರು.

ನಾನು ಮತ್ತು ನನ್ನ ಕುಟುಂಬ ಈ ಪ್ರಕರಣದಿಂದ ನೊಂದಿದ್ದೇವೆ. ನಾನು ತಪ್ಪು ಮಾಡಿಲ್ಲ ಎಂದು ವಿವರಣೆ ಕೊಡುವ ಅಗತ್ಯ ಇಲ್ಲ. ಕನ್ನಡ ಚಿತ್ರೋದ್ಯಮಕ್ಕೆ ಬಂದು 12 ವರ್ಷ ಆಗಿದೆ. ನನಗೆ ಉಸಿರಾಡಲು ಸಮಯ ಕೊಡಿ, ಒಂದಷ್ಟು ವಿಚಾರಗಳನ್ನ ಮುಂದಿನ ದಿನಗಳಲ್ಲಿ ಹೇಳ್ತೇನೆ. ನಾನು ಏನು ಅನ್ನೋದು ಎಲ್ಲರಿಗೂ ಗೊತ್ತು. ಈ ಪ್ರಕರಣದಲ್ಲಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ನಾನು ಪ್ರಕರಣದಲ್ಲಿ ಅಮಾಯಕಿ” ಎಂದು ರಾಗಿಣಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top