ಮಾರ್ಚ್ 11ರಂದು ರಾಬರ್ಟ್ ಸಿನಿಮಾ ಕರ್ನಾಟಕ ಹಾಗೂ ತೆಲುಗು ನೆಲದಲ್ಲಿ ರಿಲೀಸ್ ಆಗಬೇಕಿದೆ. ಆದರೆ ಟಾಲಿವುಡ್ನಲ್ಲಿ ವಿತರಕರೊಬ್ಬರು ರಾಬರ್ಟ್ ಸಿನಿಮಾ ರಿಲೀಸ್ಗೆ ತೊಂದರೆ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಅವರು ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಸತ್ಯ.!!
ಅಂದು ನಾನಾಡಿದ ಮಾತು ಕನ್ನಡಿಗರೆ ಸ್ವಾಭಿಮಾನಿಯಾಗಿ!ಕನ್ನಡಕ್ಕೆ ಮೊದಲು ಕೈಯತ್ತಿ ನಿಮ್ಮ ಕೈ ಕಲ್ಪವೃಕ್ಷವಾಗುತ್ತೆ ಎಂದು!ನನ್ನಭಾವನೆ ಅರ್ಥವಾಗದೆ ಸಮಯಸಾಧಕರು ಜಾಗೃತರಾಗಿ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು!ಕೆಲವರು ನಂಬಿದರು!ನನ್ನಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರಿವಾಗುತ್ತೆ ದೌರ್ಭಾಗ್ಯ!ಧನ್ಯವಾದ🙏 https://t.co/dmFIJw6ywm— ನವರಸನಾಯಕ ಜಗ್ಗೇಶ್ (@Jaggesh2) January 30, 2021
ಈ ಸಂಬಂಧ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದರ್ಶನ್ ದೂರು ನೀಡಿದ್ದಾರೆ.ತಮಿಳು ಅಥವಾ ತೆಲುಗಿನವರಿಗೆ ಇರುವ ಭಾಷಾ ಅಭಿಮಾನ ನಮ್ಮವರಿಗೆ ಕಿಂಚಿತ್ತೂ ಇಲ್ಲ. ನಮ್ಮಲ್ಲಿ ಇರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ದರ್ಶನ್ ಹೇಳಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
‘ಅಂದು ನಾನು ಕನ್ನಡಿಗರಿಗೆ ಸ್ವಾಭಿಮಾನಿಗಳಾಗಿ ಎಂದಿದ್ದೆ. ಕನ್ನಡಕ್ಕೆ ಮೊದಲು ಕೈ ಎತ್ತಿ, ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ ಎಂಬುದು ನನ್ನ ಭಾವನೆಯ ಅರ್ಥವಾಗಿತ್ತು. ಆದರೆ ನನ್ನ ಭಾವನೆಯನ್ನು ಅರ್ಥ ಮಾಡಿಕೊಳ್ಳದ ಸಮಯ ಸಾಧಕರು ಜಾಗೃತರಾಗಿ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರದ ತಂತ್ರ ರೂಪಿಸಿದ್ದರು. ಕೆಲವರು ನಂಬಿದರು. ನನ್ನ ಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರ್ಥವಾಗುತ್ತೆ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ’ ಜಗ್ಗೇಶ್.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
