fbpx
ಸಮಾಚಾರ

ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಕನ್ನಡ ಧ್ವಜ

ಚಿತ್ರರಂಗದಲ್ಲಿ ಬರೋಬ್ಬರಿ 25 ವರ್ಷಗಳನ್ನು ಪೂರೈಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಬಹು ನಿರೀಕ್ಷೆಯ ‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆಯ ಪೋಸ್ಟರ್ ಮತ್ತು ಕಟೌಟ್‌ಗಳು ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈನ ಬುರ್ಜ್‌ ಖಲೀಫಾ ಮೇಲೆ ಭಾನುವಾರ ರಾತ್ರಿ ವರ್ಣ ರಂಜಿತವಾಗಿ ರಾರಾಜಿಸಿದವು.

 

 

ನೆನ್ನೆ ರಾತ್ರಿ 9 ಗಂಟೆಗೆ ಸರಿಯಾಗಿ ಲೇಸರ್‌ ಬೆಳಕಿನ ಮೂಲಕ ಚಿತ್ರದ ಟೈಟಲ್‌ ಮತ್ತು ಕಟೌಟ್‌ಗಳು ಬುರ್ಜ್‌ ಖಲೀಫಾ ಮೇಲೆ ಮೂಡಿಬಂದವು. ಚಿತ್ರದ ಪೋಸ್ಟರ್ ಲಾಂಚ್​ನ ಯೂಟ್ಯೂಬ್​ ಮೂಲಕ ಲೈವ್​ ಆಗಿ ಪ್ರಸಾರ ಮಾಡಲಾಯಿತು. ಹೀಗಾಗಿ, ವಿಶ್ವದಾದ್ಯಂತ ಇರುವ ಕಿಚ್ಚನ ಫ್ಯಾನ್ಸ್​ಗೆ ತಮ್ಮ ನೆಚ್ಚಿನ ನಟನ ಸಿನಿಮಾದ ಟೈಟಲ್​ ಪೋಸ್ಟರ್​ ಲಾಂಚ್​ ನೋಡುವ ಅವಕಾಶ ಸಿಕ್ಕಿತು. ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಕಿಚ್ಚನ ಅಭಿಮಾನಿಗಳೂ ಅಕ್ಷರಶಃ ಖುಷಿಗೊಂಡರು.

 

 

 

ರಾರಾಜಿಸಿದ ಕನ್ನಡ ಧ್ವಜ:
ಪ್ರತಿಷ್ಠಿತ ಬುರ್ಜ್ ಖಲೀಫಾ ಮೇಲೆ ಕಿಚ್ಚನ ವಿಡಿಯೋ ಬರುವುದಕ್ಕೂ ಮೊದಲು ಕನ್ನಡ ಬಾವುಟವಾದ ಹಳದಿ ಮತ್ತು ಕೆಂಪು ಬಣ್ಣವು ಕೂಡ ಕಟ್ಟಡ ಮೇಲೆ ಪ್ರದರ್ಶಿಸಲಾಯಿತು. ಬುರ್ಜ್ ಖಲೀಫಾ ಮೇಲೆ ಮೂಡಿಬಂದ ನಮ್ಮ ಹೆಮ್ಮೆಯ ಕನ್ನಡ ಧ್ವಜವನ್ನು ಕಂಡು ಕನ್ನಡಿಗರು ರೋಮಾಂಚನಗೊಂಡಿದ್ದಾರೆ.. ಈ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top