fbpx
ಸಮಾಚಾರ

ವಿರಾಟ್- ಅನುಷ್ಕಾ ಮಗಳು ‘ವಾಮಿಕಾ’ ಹೆಸರಿನ ಅರ್ಥವೇನು ಗೊತ್ತಾ?

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಂದು ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ವಿರುಷ್ಕಾ ದಂಪತಿ ತಮ್ಮ ಮುದ್ದು ಮಗಳಿಗೆ ‘ವಮಿಕಾ(VAMIKA)’ ಎಂದು ಹೆಸರಿಟ್ಟಿದ್ದಾರೆ. ನವಜಾತ ಶಿಶುವಿನ ಮೊದಲ ಚಿತ್ರವನ್ನು ನಟಿ ಅನುಷ್ಕಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಾಮಿಕಾ ಅಂದರೇನು?
ವಾಮಿಕಾ ಅಂದರೆ ದುರ್ಗಿಯ ಹೆಸರಂತೆ. ದೇವರಿಗೆ ಅನೇಕ ನಾಮಗಳಿರುತ್ತವೆ. ಅಂತೆಯೇ ದುರ್ಗೆಯನ್ನು ವಾಮಿಕಾ ಅಂತ ಕೂಡ ಕರೆಯಲಾಗುತ್ತದೆ. ದುರ್ಗೆಯನ್ನು ವಿಶೇಷವಾಗಿ ವಾಮಿಕಾ ಅಂತ ಕೂಡ ಕರೆಯಲಾಗುತ್ತದೆ. ವಾಮ ಅಂದರೆ ಎಡ, ಶಿವ ಸ್ಮಶಾನವಾಸಿ. ವಾಮ ಎಂಬ ಪದದಿಂದ ವಾಮಿಕಾ ಹೆಸರು ಹುಟ್ಟಿದೆ. ಅಂದರೆ ಹಿಂದು ಧರ್ಮದ ದೇವರು ಶಿವನ ಮುಖವಾಗಿದೆ. ಅಂದರೆ ತಾಳ್ಮೆ, ಸಂಯಮದಿಂದ ಕೂಡಿದೆ ಎಂದರ್ಥ. ಅಂದರೆ ಶಿವನ ಅರ್ಧಾಂಗಿ ಅಂದರೆ ದುರ್ಗಿ. ಹೀಗಾಗಿ ದುರ್ಗೆಯನ್ನು ವಾಮಿಕಾ ಅಂತ ಕರೆಯಲಾಗುತ್ತದೆ.

ತನ್ನ ಪೋಸ್ಟ್ನಲ್ಲಿ, ಅವರು ತಾಯಿಯಾಗಿರುವ ತಮ್ಮ ಅನುಭವದ ಬಗ್ಗೆ ಮತ್ತು ಅವರ ಮಗಳು ವಮಿಕಾ ತಮ್ಮ ಜೀವನವನ್ನು ಹೇಗೆ ಹೊಸ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ ಎಂಬುದರ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

“ನಾವು ಪ್ರೀತಿ, ಕೃತಜ್ಞತೆಯಿಂದ ಬದುಕಿದಂತೆ ನಾವು ವಮಿಕಾಳನ್ನು ಕೂಡ ನಡೆಸಿಕೊಂಡು ಹೋಗುತ್ತೇವೆ. ಕೆಲವೊಂದು ಸಂದರ್ಭದಲ್ಲಾದರೂ ಅಳು, ನಗು, ಚಿಂತೆ, ಆನಂದ ಭಾವನೆಗಳನ್ನು ಅನುಭವಿಸಿದ್ದೇವೆ, ನಿದ್ದೆ ಅಸ್ಪಷ್ಟವಾಗಿದೆ, ಆದರೆ ಹೃದಯ ತುಂಬಿದೆ. ಶುಭಾಶಯ ತಿಳಿಸಿದವರಿಗೆ ಎಲ್ಲರಿಗೂ ಧನ್ಯವಾದಗಳು” ಎಂದು ನಟಿ ಅನುಷ್ಕಾ ಶರ್ಮಾ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಅನುಷ್ಕಾ ಶರ್ಮಾ ದಂಪತಿ ಜನವರಿ 11ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಅನುಷ್ಕಾ ಹೆರಿಗೆ ನಿಮಿತ್ತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ ವಿರಾಟ್​ ಕೊಹ್ಲಿ, ತಮಗೆ ಮಗಳು ಹುಟ್ಟಿದ ವಿಷಯವನ್ನು ಟ್ವಿಟರ್​ ಮೂಲಕ ಹಂಚಿಕೊಂಡಿದ್ದರು. ನಮ್ಮ ಜೀವನದ ಹೊಸ ಅಧ್ಯಾಯ ಇಂದಿನಿಂದ ಶುರುವಾಯಿತು ಎಂದು ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top