fbpx
ಸಮಾಚಾರ

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ RCBಯ ಮಾಜಿ ವೇಗಿ!

ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದಂತೆ ಹಲವು ಫ್ರಾಂಚೈಸಿ ತಂಡಗಳ ಪರ ಆಡಿ ಮಿಂಚಿದ್ದ ಅಶೋಕ್ ದಿಂಡಾ (Ashok Dinda) ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಫೆಬ್ರವರಿ 2 ರಂದು, ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ, ಅವರ ಸುಮಾರು ಒಂದೂವರೆ ದಶಕದ ಸುದೀರ್ಘ ವೃತ್ತಿಜೀವನ ಕೊನೆಗೊಂಡಿದೆ.

 

 

ಈಡನ್ ಗಾರ್ಡನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಿಂಡಾ, ಇಂದು ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಬಿಸಿಸಿಐ ಮತ್ತು ಗೋವಾ ಕ್ರಿಕೆಟ್ ಸಂಘಕ್ಕೆ ಇಮೇಲ್ ಕಳುಹಿಸಿದ್ದೇನೆ ಎಂದರು. ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ, ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಮತ್ತು ಜಂಟಿ ಕಾರ್ಯದರ್ಶಿ ದೇವವ್ರತಾ ದಾಸ್ ಅವರು ದಿಂಡಾ ಅವರ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿ, ಬೆಳ್ಳಿ ಫಲಕ ನೀಡಿ ಸನ್ಮಾನಿಸಿದರು.

‘ಭಾರತ ಪರ ಆಡಬೇಕನ್ನೋದು ಪ್ರತಿಯೊಬ್ಬರ ಕನಸು. ನಾನು ಬೆಂಗಾಲ್ ತಂಡದಲ್ಲಿ ಆಡಿದ್ದೆ. ಹಾಗಾಗಿ ನನಗೆ ಭಾರತ ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಭಾರತ ಪರ ಆಡುವ ಅವಕಾಶವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನನಗೆ ನೀಡಿತು ಅಂದುಕೊಳ್ಳುತ್ತೇನೆ,’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಡಾ ಹೇಳಿದ್ದಾರೆ.

“ನನ್ನ ಮಂಡಿಗೆ ಗಾಯವಾಗಿದೆ. ಹೀಗಾಗಿ ಕಳೆದ ಎರಡು ಪಂದ್ಯಗಳಲ್ಲಿ ಆಡಲು ನನ್ನಿಂದ ಸಾಧ್ಯವಾಗಲಿಲ್ಲ. ಆಡಲು ನನ್ನ ದೇಹ ಸಹಕರಿಸುತ್ತಿಲ್ಲ. ನನ್ನ ಮಂಡಿಯಲ್ಲಿ ಈಗಲೂ ಊತವಿದೆ. ಓಡಲು ಆಗುತ್ತಿಲ್ಲ. ನನಗೀಗ 37 ವರ್ಷ. ವೇಗದ ಬೌಲರ್‌ಗಳಿಗೆ 37 ವರ್ಷವಾದ ಮೇಲೆ ಬಹಳಾ ಕಷ್ಟ. ಇಲ್ಲದಿದ್ದರೆ ನಾನು ನಿವೃತ್ತಿ ಹೇಳುವ ಮಾತೇ ಇರಲಿಲ್ಲ. ನನ್ನ ದೇಹ ನನಗೆ ಸಹಕಾರ ನೀಡುತ್ತಿಲ್ಲ,” ಎಂದು ಭಾರತ ತಂಡದ ಪರ 13 ಒಡಿಐ ಮತ್ತು 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ದಿಂಡಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top