fbpx
ಸಮಾಚಾರ

“ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ” ಸುಧಾಕರ್ ಸಮರ್ಥನೆ

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಮುಂದುವರಿಸುವ ಸರ್ಕಾರದ ತೀರ್ಮಾನದ ಬಗ್ಗೆ ಚಿತ್ರರಂಗದ ಹಿರಿಯ ನಟರು ಪ್ರಶ್ನೆ ಮಾಡಿದ ಬೆನ್ನಲ್ಲೇ ಆರೋಗ್ಯ ಸಚಿವ ಕೆ ಸುಧಾಕರ್ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಮತ್ತು ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದೆ. ಸಿಎಂ ಜೊತೆಗೂ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್, ಎಸಿ ಇರೋ ಜಾಗ. ಬಹಳ ಬೇಗನೆ ಸೋಂಕು ಹರಡಲಿದೆ. ರಾಜಕಾರಣದ ಸಭೆ ಸರಿ ಅಂತ ನಾವು ಹೇಳಿಲ್ಲ. ಆದ್ರೆ ಹೊರಗಡೆ ಮಾಡ್ತಿದ್ದಾರೆ, ಆದರೆ ಅದೂ ಸರಿ ಅಂತ ಹೇಳಲ್ಲ. ನಿಯಂತ್ರಣ ಮಾಡೋದು ನಮ್ಮ ಸರ್ಕಾರದ ಜವಾಬ್ದಾರಿ. ನಾನು ಮಂತ್ರಿಯಾಗಿ ಏಕಾಏಕಿ ನಿರ್ಧಾರ ಸಾಧ್ಯವಾಗಲ್ಲ. ಮನರಂಜನೆಗಿಂತ ಮುಖ್ಯ ಜನರ ಆರೋಗ್ಯ. ಸಿಎಂ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಮುಂದೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top