fbpx
ಸಮಾಚಾರ

ರೈತರ ಪ್ರತಿಭಟನೆ ಬೆಂಬಲಿಸಿದ ನೀಲಿಚಿತ್ರ ತಾರೆ ‘ಮಿಯಾ ಖಲೀಫಾ’ : ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡ್!

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 2 ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ತಾರೆಗಳು ಬೆಂಬಲ ಸೂಚಿಸುತ್ತಿದ್ದಾರೆ. ಖ್ಯಾತ ಪಾಪ್ ತಾರೆ ರಿಹಾನಾ, ಸ್ವೀಡನ್ ನ ಪರಿಸರ ಕಾರ್ಯಕರ್ತೆ ಎಂದು ಗ್ರೇಟಾ ಥನ್‍ಬರ್ಗ್ ಬಳಿಗ ಈಗ ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

 

 

ಮಿಯಾ ಖಲೀಫಾ ಅವರ ಹೆಸರಿನಲ್ಲಿರುವ ಟ್ವೀಟ್ ಖಾತೆಯಿಂದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮಾಡಲಾಗಿರುವ ಟ್ವೀಟ್ ಟ್ವಿಟರ್ ನ ಟಾಪ್ ಟ್ರೆಂಡ್ ನಲ್ಲಿ ಕಾಣಿಸಿಕೊಂಡಿದೆ. #FarmersProtest ಎಂಬ ಹ್ಯಾಷ್ ಟ್ಯಾಗ್ ಬಳಸಿ, ನವದೆಹಲಿಯಾದ್ಯಂತ ಅಂತರ್ಜಾಲ ಸಂಪರ್ಕ ಕಡಿತಗೊಳಿಸಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಟ್ವೀಟ್ ಮಾಡಲಾಗಿದೆ.

 

 

“ರೈತರು ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪರಮಾವಧಿ” ಎಂದು ಮಿಯಾ ಖಲೀಫಾ ಅವ್ರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಫಾರ್ಮರ್ ಪ್ರೊಟೆಸ್ಟ್ ಎಂಬ ಹ್ಯಾಷ್ ಟ್ಯಾಗ್ ಅನ್ನು ಸಹ ಬಳಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top