fbpx
ಸಮಾಚಾರ

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ನಟಿ ನಯನ :ಗುಡ್‌ನ್ಯೂಸ್ ಕೊಟ್ಟ ಬಿಗ್‌ಬಾಸ್ ಬ್ಯೂಟಿ

‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 6’ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ನಯನಾ ಪುಟ್ಟಸ್ವಾಮಿ ಅವರು ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ನಯನಾ ಪುಟ್ಟಸ್ವಾಮಿ ಅವರು ಈಗ ಪತಿಯ ಜೊತೆ ವಿದೇಶದಲ್ಲಿ ವಾಸವಿದ್ದಾರೆ. ಮುಂಬರುವ ಆಗಸ್ಟ್‌ನಲ್ಲಿ ನಯನಾ ಪುಟ್ಟಸ್ವಾಮಿ ದಂಪತಿ ತಂದೆ-ತಾಯಿಗಳಾಗಿ ಬಡ್ತಿ ಪಡೆಯಲಿದ್ದಾರಂತೆ.

 

 

ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಪಡುತ್ತಿರುವ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು “ಹೊಸ ಆರಂಭ, ಈ ಖುಷಿಯನ್ನು ಸಂಭ್ರಮ ಪಡಲು ಕಾಯಲಾಗುತ್ತಿಲ್ಲ. ಆಗಸ್ಟ್‌ ತಿಂಗಳಲ್ಲಿ ಮಗು ಬರಲಿದೆ. ಧನ್ಯವಾದಗಳು” ಎಂದು ನಯನಾ ಹೇಳಿದ್ದಾರೆ. ನಯನಾ ಹಾಗೂ ಚರಣ್ ತೇಜ್ ಅವರಿಗೆ ನೆಟ್ಟಿಗರು ಶುಭಾಶಯ ಹೇಳಿದ್ದಾರೆ.

ತಾವು ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಡಾರ್ಕ್ ಬ್ಲೂ ಗೌನ್‌ ಧರಿಸಿ, ಫ್ರೀ ಹೇರ್ ಬಿಟ್ಟದ್ದ ನಯನ ಮುದ್ದಾಗಿ ಕಂಡಿದ್ದಾರೆ. ಗರ್ಲ್ ಬಾಯ್ ಎನ್ನುವ ಫಲಕ ಹಾಕಿ ಪತಿಯ ಜೊತೆ ಪ್ರೆಗ್ನೆನ್ಸಿ ನ್ಯೂಸ್ ರಿವೀಲ್ ಮಾಡಿದ್ದಾರೆ ನಯನಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top